

ಮೈಸೂರು: ಪ್ರಸಿದ್ಧ ಉದ್ಯಮಿ ರತನ್‌ಟಾಟಾ ಅವರ ನಿಧನರಾದ ಒಂದು ತಿಂಗಳ ನೆನಪಿಗಾಗಿ ನಗರದಲ್ಲಿ ಅವರ ಬೃಹತ್‌ಚಿತ್ರ ಬಿಡಿಸುವ ಮೂಲಕವಿಶಿಷ್ಟವಾಗಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮೈಸೂರು ಕಲಾವಿದರ ಬಳಗದಿಂದ ಸುಮಾರು 8 ಸಾವಿರ ಚದರ ಅಡಿ ಅಳತೆಯಲ್ಲಿ ರಂಗೋಲಿ ಆರ್ಟ್ ಮೂಲಕ ರತನ್ ಟಾಟಾ ಅವರ ಚಿತ್ರ ಬಿಡಿಸಿ ಗೌರವ ಸಲ್ಲಿಸಲಾಯಿತು.
ನಗರದ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಮೂಡಿ ಬಂದ ಚಿತ್ರವನ್ನು ವಿಶ್ವ ದಾಖಲೆಯ ಕಲಾವಿದ ಪುನೀತ್ ಕುಮಾರ್ ಹಾಗೂ ಖ್ಯಾತ ಕಲಾವಿದೆ ಲಕ್ಷ್ಮೀ ತಂಡದಿಂದ ಅರಳಿಸಲಾಯಿತು.
ಶನಿವಾರ ರಾತ್ರಿ 10 ಗಂಟೆಗೆ ಆರಂಭಿಸಿ ಭಾನುವಾರ ಬೆಳಗ್ಗೆ 8 ಗಂಟೆಯ ತನಕ ನಿರಂತರ ಪರಿಶ್ರಮದಿಂದ ರತನ್ ಟಾಟಾ ಅವರ ಭಾವ ಚಿತ್ರ ಮೂಡಿಸಲಾಯತು. ಸಂಜೆ ನಡೆದ ಸರಳ ಕಾರ್ಯಕ್ರಮದಲ್ಲಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮೇಣದ ಬತ್ತಿ ಹಚ್ಚುವ ಮೂಲಕ ಶ್ರದ್ಧಾಂಜಲಿ ಸಲಿಸಿದರು.
ಈ ಕಾರ್ಯಕ್ಕೆ ಸ್ಪಾರ್ಟ್ ಅಕಾಡೆಮಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕರ ಬಳಗ, ಕುರುಬಾರಹಳ್ಳಿ ಬಳಗ ಹಾಗೂ ಓಂಕಾಸ್ ಸಹಭಾಗಿತ್ವದೊಂದಿಗೆ ದೀಪ ಹೆಚ್ಚುವ ಕಾರ್ಯಕ್ರಮ ನಡೆಯಿತು. ಜಿಮ್ನಾಸ್ಟಿಕ್ಸ್ ಪ್ರತಿಭೆಗಳಾದ ಪ್ರಣತಿ ಮತ್ತು ಪ್ರಜ್ಞಾ ಅವರನ್ನು ಸನ್ಮಾನಿಸಲಾಯಿತು.
ತಂಡದ ಸದಸ್ಯರಾದ ಪುನೀತ್ ರಾಯಣ್ಣ, ಮೋನಿಕಾ, ಮಂಜುನಾಥ್, ಸೋನು, ಸಂಪ್ರಿತ್, ರವಿ, ರಾಘವೇಂದ್ರ, ಅರಳಿಕಟ್ಟೆ ಮಂಜುನಾಥ್, ಚಿನಕುರುಳಿ ರಾಘವೇಂದ್ರ, ಆದಿತ್ಯ ಇತರರು ಕಲಾವಿದರಿಗೆ ಸಾಥ್ ನೀಡಿದರು.