ರತನ್ ಟಾಟಾ ನಿಧನ ತುಂಬಲಾರದ ನಷ್ಟ: ಸರ್‌ಎಂವಿ ಗೆಳೆಯರ ಬಳಗದ ಸದಸ್ಯ ಹೊಸಹಳ್ಳಿ ಶಿವು ಹೇಳಿಕೆ

Tribute to Ratan Tata Mandya
oppo_0
Published on

ಮಂಡ್ಯ: ಖ್ಯಾತ ಕೈಗಾರಿಕೋದ್ಯಮಿ ಮತ್ತು ಸಮಾಜಸೇವಕ ರತನ್ ಟಾಟಾ ನಿಧನ ದೇಶಕ್ಕೆ ತುಂಬಲಾರದ ನಷ್ಟ ಎಂದು ಸರ್‌ಎಂವಿ ಗೆಳೆಯರ ಬಳಗದ ಸದಸ್ಯ ಹೊಸಹಳ್ಳಿ ಶಿವು ಹೇಳಿದರು.

ನಗರದ ಹೊಸಹಳ್ಳಿ ಎಸ್.ಡಿ.ಜಯರಾಂ ಆಟೋ ನಿಲ್ದಾಣ ವೃತ್ತದಲ್ಲಿ ಸರ್.ಎಂ.ವಿ.ಗೆಳೆಯರ ಬಳಗದಿಂದ ಆಯೋಜಿಸಿದ್ದ ರತನ್ ಟಾಟಾ ಅವರಿಗೆ ಶ್ರದ್ಧಾಂಜಲಿ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲಕ್ಷಾಂತರ ಭಾರತೀಯರಿಗೆ ಉದ್ಯೋಗದಾತರಾಗಿ ಕೋಟ್ಯಂತರ ಕುಟುಂಬಕ್ಕೆ ನೆರವಾಗಿದ್ದರು. ಕೈಗಾರಿಕೋದ್ಯಮಿ ಮಾದರಿಯಾಗಿ ಹೇಗೆ ಸಮಾಜ ಸೇವೆ ಮಾಡಬಹುದು ಎನ್ನುವುದಕ್ಕೆ ಉದಾಹರಣೆಯಾಗಿದ್ದಾರೆ. ಸೈನಿಕರನ್ನು ಗೌರವಿಸುತ್ತಿದ್ದರು. ರೈತಾಪಿ ವರ್ಗ ಬಳಸುವ ಸಾಕಷ್ಟು ಪರಿಕರಗಳು ಕಡಿಮೆ ದರದಲ್ಲಿ ಲಭಿಸುವಂತೆ ಮಾಡಿದ್ದರು. ಟಾಟಾ ಗ್ರೂಪ್‌ಗೆ ಜಾಗತಿಕ ಮನ್ನಣೆಯನ್ನು ತಂದುಕೊಟ್ಟ ವ್ಯಕ್ತಿ. ವ್ಯಾಪಾರದೊಂದಿಗೆ ಸಾಮಾಜಿಕ ಜವಾಬ್ದಾರಿಗಳಿಗೆ ಹೊಸ ಮಾನದಂಡವನ್ನು ಸ್ಥಾಪಿಸಿದ ಭಾರತೀಯ ಉದ್ಯಮದ ಆಧಾರಸ್ತಂಭ. ಅವರ ಜೀವನ ಹೋರಾಟ, ಸಮರ್ಪಣೆ ಮತ್ತು ಹೊಸತನದ ಸಂಕೇತವಾಗಿತ್ತು ಎಂದು ಹೇಳಿದರು.

ನಗರಸಭಾ ಮಾಜಿ ಸದಸ್ಯ ಶಿವಕುಮಾರ್ ಕೆಂಪಯ್ಯ, ಬಳಗದ ಸಚಿನ್, ಆನಂದ್, ವೈರಮುಡಿ, ಅನಿಲ್ ಇತರರಿದ್ದರು. ಇದೇ ವೇಳೆ ರತನ್ ಟಾಟಾ ಅವರ ಭಾವಚಿತ್ರಕ್ಕೆ ದೀಪ-ಪುಷ್ಪನಮನ ನೆರವೇರಿಸಲಾಯಿತು. ಒಂದು ನಿಮಿಷ ಮೌನಾಚರಣೆ ಮಾಡಿ ಸಂತಾಪ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net