

ವಿಜಯಪುರ: ದೇಶದಕ ಖ್ಯಾತ ಉದ್ಯಮಿ, ಮಹಾ ಮಾನವತಾವಾದಿ ರತನ್ ಟಾಟಾಗೆ ಬಿಜ್ಜರಗಿ ಸಮೂಹ ಸಂಸ್ಥೆ ಹಾಗೂ ವಿವಿಧ ಸಂಘ-ಸಂಸ್ಥೆಗಳು ಗುರುವಾರ ಶ್ರದ್ಧಾಂಜಲಿ ಸಮರ್ಪಿಸಿದವು.
ಇಲ್ಲಿನ ಸಿದ್ಧೇಶ್ವರ ದೇವಸ್ಥಾನದ ಎದುರು ರತನ್ ಟಾಟಾ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಲಾಯಿತು.
ಬಿಜ್ಜರಗಿ ಸಮೂಹ ಸಂಸ್ಥೆ ಮುಖ್ಯಸ್ಥ ರಾಜು ಬಿಜ್ಜರಗಿ ಮಾತನಾಡಿ, ದೇಶಕ್ಕೆ ರತನ್ ಟಾಟಾ ಕೊಡುಗೆ ಅಪಾರ. ಅವರೊಬ್ಬ ಮಾನತವಾದಿ, ಅಪ್ಪಟ ದೇಶಭಕ್ತ. ಸೂಜಿಯಿಂದ ವಿಮಾನದವರೆಗೆ, ಉಪ್ಪಿನಿಂದ ಉಕ್ಕಿನ ಕಾರ್ಖಾನೆವರೆಗೆ ಅನೇಕ ಕಾರ್ಖಾನೆಗಳನ್ನು ಸ್ಥಾಪಿಸಿ ಕೋಟ್ಯಂತರ ಜನರಿಗೆ ಉದ್ಯೋಗ ಸೃಷ್ಠಿಸಿ ಅಪ್ರತಿಮ ಸಾಧನೆ ಮಾಡಿದ್ದ ಪುಣ್ಯಾತ್ಮ ಎಂದರು.
ಪ್ರಾಣೇಶ ಜಹಗೀರದಾರ, ರಾಜು ಗಚ್ಚಿನಮಠ, ಸ್ವಾಮಿ ವಿವೇಕಾನಂದ ಸಂಸ್ಥೆಯ ಮುಖ್ಯಸ್ಥ ರಾಘವ ಅಣ್ಣಿಗೇರಿ ಅವರು ರತನ್ ಟಾಟಾ ಅವರ ಸಾಧನೆ ಸ್ಮರಿಸಿದರು.
ಸಂಗನಬಸಪ್ಪ ಸಜ್ಜನ, ಶ್ರೀಹರ್ಷಗೌಡ ಪಾಟೀಲ, ಗುರುಪಾದಯ್ಯ(ಗುರು) ಗಚ್ಚಿನಮಠ, ವಿಜಯಕುಮಾರ ಇಜೇರಿ, ರವೀಂದ್ರ ಬಿಜ್ಜರಗಿ, ಸಂದೀಪ ಬಿಜ್ಜರಗಿ, ಸಂತೋಷ ಗಣಿ, ಸಂಕೇತ ಬಗಲಿ, ಈರಣ್ಣ ಧಾರವಾಡಕರ, ಅಶೋಕ ನ್ಯಾಮಗೌಡ, ರಾಜೇಶ ದೇವಗಿರಿ, ಸಿದ್ಧು ಜೋಗುರ, ಅರುಣ ವಾರದ, ಗಿರೀಶ ಅನಂತಪೂರ, ಶರಣಪ್ಪ ಕೋರಳ್ಳಿ, ಮಹೇಶ ಬಿದನೂರ, ಬಸವರಾಜ ಬೈಚಬಾಳ, ಶರಣು ಸಬರದ, ಗಿರೀಶ ಪಾಟೀಲ, ಮುತ್ತು ಗಂಗಾಧರ ಮತ್ತಿತರರಿದ್ದರು.