

ಗೋಳಿಯಂಗಡಿ: ದಕ್ಷಿಣ ಕನ್ನಡ ಹಾಲು ಒಕ್ಕೂಟದ ಮಂಗಳೂರಿನಲ್ಲಿ ಇತ್ತೀಚೆಗೆ ಕುಂದಾಪುರ ತಾಲೂಕಿನ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಸಭೆಯಲ್ಲಿ ಕುಂದಾಪುರ ತಾಲೂಕಿನ 2023-24ನೇ ಸಾಲಿನ ಉತ್ತಮ ಕೃತಕ ಗರ್ಭಧಾರಣಾ ಕಾರ್ಯಕರ್ತ ಪ್ರಶಸ್ತಿ ತೊಂಬತ್ತು ಹಾಲು ಉತ್ಪಾದಕರ ಸಹಕಾರಿ ಸಂಘ ಮುಖ್ಯ ಕಾರ್ಯ ನಿರ್ವಾಹರ್ಣಾಧಿಕಾರಿ ರಾಜೀವ ಪೂಜಾರಿಯವರಿಗೆ ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರೀತ ಶೆಟ್ಟಿ ನೀಡಿ ಗೌರವಿಸಿದರು. ಒಕ್ಕೂಟ ನಿರ್ದೇಶಕರಾದ ರವಿರಾಜ ಹೆಗ್ಡೆ ಕೊಡವೂರು, ದಿವಾಕರ ಶೆಟ್ಟಿ ಕಾಪು, ಪ್ರಕಾಶ್ಚಂದ್ರ ಶೆಟ್ಟಿ, ಕಮಲಾಕ್ಷ ಹೆಬ್ಬಾರ್, ನರಸಿಂಹ ಕಾಮತ್ ಸಾಣೂರು, ಸುಧಾಕರ ಶೆಟ್ಟಿ, ಸ್ಮೀತಾ ಆರ್.ಶೆಟ್ಟಿ, ಸದಾಶಿವ ಶೆಟ್ಟಿ ಭೋಳ, ವ್ಯವಸ್ಥಾಪಕ ವಿವೇಕ್, ರವಿರಾಜ ಉಡುಪ, ವಿಸ್ತಾರಣಾಧಿಕಾರಿ ವಿಘ್ನೇಶ್, ತೊಂಬತ್ತು ಹಾಲು ಉತ್ಪಾದಕರ ಸಹಕಾರಿ ಸಂಘ ಅಧ್ಯಕ್ಷ ರಾಮಮೂರ್ತಿ ಕರಬ ತೊಂಬತ್ತು ಉಪಸ್ಥಿತರಿದ್ದರು.