ದೈಹಿಕ ಶಿಕ್ಷಕ ದಿನೇಶ್‌ಗೆ ಸನ್ಮಾನ

dinesh sanmana
Published on

ಮಡಿಕೇರಿ: ನಗರದ ಕೊಡಗು ವಿದ್ಯಾಲಯದ ದೈಹಿಕ ಶಿಕ್ಷಕರಾದ ದಿನೇಶ್ ಮತ್ತು ಪಾರ್ವತಿ ಅವರನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.


ಹಾಕಿ ಇಂಡಿಯಾ ಸೆಮಿನಾರ್‌ನಲ್ಲಿ ಲೆವೆಲ್ ಒನ್ ತರಬೇತಿದಾರರಾಗಿ ಗುರುತಿಸಿಕೊಂಡಿರುವ ದಿನೇಶ್, ರಾಜ್ಯ ಮಟ್ಟದ ಪಂದ್ಯಗಳಲ್ಲಿ ಅಂಪೈರ್ ಆಗಿ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲೆಯ ರಿಂಕ್ ಹಾಕಿ ವಿಜೇತ ತಂಡದ ಆಟಗಾರರನ್ನೂ ಈ ಸಂದರ್ಭ ಕೊಡಗು ವಿದ್ಯಾಲಯದ ಪ್ರಾಂಶುಪಾಲೆ ಸುಮಿತ್ರಾ ಸನ್ಮಾನಿಸಿದರು. ಅಂತೆಯೇ ಕ್ರೀಡಾ ತರಬೇತುಗಾರರಾದ ಪಾರ್ವತಿ ಅವರಿಗೂ ಪ್ರಶಂಸನಾ ಪತ್ರ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net