ನೇಹಾಗೆ ಶ್ರದ್ಧಾಂಜಲಿ

22 mlv 2
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: video;hw-remosaic: false;touch: (0.2630163, 0.48415172);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 49;
Published on

ಮಳವಳ್ಳಿ: ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹಿರೆಮಠ ಹತ್ಯೆ ಮಾಡಿದವನಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ತಾಲೂಕು ವೀರಶೈವ ಲಿಂಗಾಯಿತ ಮುಖಂಡ ಆರ್.ಎಂ.ಚಂದ್ರಶೇಖರ ಮೂರ್ತಿ ಒತ್ತಾಯಿಸಿದರು.

ಪಟ್ಟಣದಲ್ಲಿ ಸೋಮವಾರ ನೇಹಾಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿ, ಇಂತಹ ಅಮಾನವೀಯ ಕೃತ್ಯ ನಡೆದಿದ್ದರೂ ರಾಜ್ಯ ಸರ್ಕಾರದ ಪ್ರಮುಖ ಹುದ್ದೆಗಳಲ್ಲಿ ಇರುವವರು ತಾತ್ಸಾರ ಮನೋಭಾವದಿಂದ ಮಾತನಾಡುತ್ತಿದ್ದಾರೆ. ಈ ಬಗ್ಗೆ ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಸಂಘಟಿತಗೊಳಿಸಲು ಸಮುದಾಯದ ಮುಖಂಡರು ತಾಲೂಕಿನಾದ್ಯಂತ ಸಂಚರಿಸುತ್ತಿದ್ದೇವೆ ಎಂದು ತಿಳಿಸಿದರು.

ಚಿಕ್ಕಮುಲಗೂಡು ಪುಟ್ಟುಬುದ್ದಿ ಮಾತನಾಡಿದರು. ಮುಖಂಡರಾದ ಕುಂದೂರು ಮೂರ್ತಿ, ಜಗದೀಶ್, ಬಿ.ಜಿ.ಪುರ ಪ್ರಭುಸ್ವಾಮಿ, ಡಿ.ಹಲಸಹಳ್ಳಿ ತೊಟ್ಟಿಮನೆ ಚನ್ನಪ್ಪ, ಮಾಗನೂರು ವೃಷಬೇಂದ್ರಪ್ಪ, ನಂಜೇಗೌಡನದೊಡ್ಡಿ ಬಸಪ್ಪದೇವರು, ಸಂಶೆಟ್ಟಿಪುರ ಲೋಕೇಶ್, ಗೌಡಗೆರೆ ಕುಮಾರ, ಕನ್ನಳ್ಳಿ ಪ್ರಸಾದ್, ಕಗ್ಗಲೀಪುರ ಆನಂದ್, ಹಳದಾಸನಹಳ್ಳಿ ಶಿವಣ್ಣ, ಹರೀಶ್ ಪಾಟೀಲ್, ಚಿಕ್ಕಬಾಗಿ ಸಂತೋಷ್, ಕ್ಯಾತನಹಳ್ಳಿ ಅಶೋಕ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net