

ಮೈಸೂರು: ದಸರಾ ಮೆರವಣಿಗೆ ಹಾಗೂ ಪಂಜಿನ ಕವಾಯತು ಸಮಿತಿಯಿಂದ ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ಮಂಗಳವಾರ ಸಮಿತಿಯ ಅಧ್ಯಕ್ಷರಾದ ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವಿಕರಿಸಿ ಮಾತನಾಡಿದ ಡಾ. ಚಂದ್ರಗುಪ್ತ, ದಸರಾ ಉತ್ಸವದಲ್ಲಿ ಜಂಬೂಸವಾರಿ ಮೆರವಣಿಗೆ ಅತ್ಯಂತ ಪ್ರಮುಖವಾದದ್ದು. ಈ ಬಾರಿ ಮೆರವಣಿಗೆ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಮೆರವಣಿಗೆ ಯಶಸ್ವಿಗೊಳ್ಳಲು ಸಮಿತಿ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಸಾಕಷ್ಟು ಸಹಕಾರ ನೀಡಿದರು ಎಂದರು.
ಈ ಸಂದರ್ಭ ಸಮಿತಿಯ ಉಪಾಧ್ಯಕ್ಷರಾದ ಗೋಪಾಲ್ ರಾಜೇ ಅರಸ್, ಉಮೇಶ್, ಮಹೇಶ್, ಸದಸ್ಯರಾದ ವಿಕ್ರಂ ಅಯ್ಯಂಗಾರ್, ರಾಕೇಶ್ ಭಟ್, ಬಿ.ಸಿ. ಶಶಿಕಾಂತ್, ಕೆ.ಎಂ.ನಿಶಾಂತ್, ಜಯರಾಂ, ಜಗದೀಶ್, ಎಂ.ಆರ್. ಬಾಲಕೃಷ್ಣ, ಕಿಶೋರ್, ಪದ್ಮನಾಭ, ಶ್ರೀನಿವಾಸ್ ಪ್ರಸಾದ್, ಮಣಿರತ್ನ, ಸೋಮಶೇಖರ್, ಭರತ್ ಜೆಟ್ಟಿ, ಕೀರ್ತಿರಾಜ್, ನಗರಪಾಲಿಕೆ ಸದಸ್ಯ ಸುಬ್ಬಯ್ಯ, ಡಿಸಿಪಿ ಗೀತಾಪ್ರಸನ್ನ ಹಾಗೂ ಇತರರು ಇದ್ದರು.