ಕುಮಾರ ವಿರುಪಾಕ್ಷ ಶ್ರೀಗಳಿಗೆ ಗೌರವ ಸನ್ಮಾನ

Tribute to Mr. Kumar Virupaksha
ಮುದ್ದೇಬಿಹಾಳದಲ್ಲಿನ ಮಾಜಿ ಶಾಸಕ ನಡಹಳ್ಳಿ ಅವರ ನಿವಾಸದಲ್ಲಿ ಕುಮಾರ ವಿರುಪಾಕ್ಷ ಸ್ವಾಮೀಜಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎ.ಎಸ್.ಪಾಟೀಲ ನಡಹಳ್ಳಿ, ಸಂಗನಗೌಡ ಪಾಟೀಲ, ಗಂಗಾಬಾಯಿ ಪಾಟೀಲ ಇತರರಿದ್ದರು.
Published on

ಮುದ್ದೇಬಿಹಾಳ: ಪಟ್ಟಣದ ಮಾರುತಿ ನಗರದಲ್ಲಿರುವ ಮಾಜಿ ಶಾಸಕ, ಉದ್ಯಮಿ ಎ.ಎಸ್.ಪಾಟೀಲ ನಡಹಳ್ಳಿ ಅವರ ಫಾರ್ಮ್‌ಹೌಸ್‌ಗೆ ಧಾರವಾಡ ಜಿಲ್ಲೆ ಉಪ್ಪಿನ ಬೆಟಗೇರಿ ಮೂರು ಸಾವಿರ ವಿರಕ್ತ ಮಠದ ಕುಮಾರ ವಿರುಪಾಕ್ಷ ಶ್ರೀಗಳು ಭೇಟಿ ನೀಡಿ ನಡಹಳ್ಳಿ ಕುಟುಂಬದಿಂದ ಗೌರವ ಸನ್ಮಾನ ಸ್ವೀಕರಿಸಿದರು.

ಸ್ವಾಮೀಜಿ ಅವರು ನಡಹಳ್ಳಿ ಅವರಿಗೆ ರುದ್ರಾಕ್ಷ ಮಾಲೆ ನೀಡಿ, ಶಾಲು ಹೊದಿಸಿ ಶುಭಾಶೀರ್ವದಿಸಿದರು.ಫಾರ್ಮ್‌ಹೌಸ್‌ನ ಆವರಣದಲ್ಲಿರುವ ಕೈತೋಟ, ವಿವಿಧ ಲ ಪುಷ್ಪಗಳ ಗಿಡಗಳು, ಅಚ್ಚುಕಟ್ಟುತನ ಹಾಗೂ ಪರಿಸರ ಕಾಳಜಿ ನೋಡಿ ಹರ್ಷ ವ್ಯಕ್ತಪಡಿಸಿದ ಸ್ವಾಮೀಜಿ ಅವರು ನಡಹಳ್ಳಿ ಅವರ ಕ್ರಿಯಾಶಕ್ತಿಯನ್ನು ಶ್ಲಾಸಿದರು. ನಡಹಳ್ಳಿ ಅವರ ತಂದೆ ಸಂಗನಗೌಡ ಪಾಟೀಲ, ತಾಯಿ ಗಂಗಾಬಾಯಿ ಅವರು ಸ್ವಾಮೀಜಿ ಪಾದಪೂಜೆ ನಡೆಸಿ ಮನೆಯೊಳಗೆ ಸ್ವಾಗತಿಸಿಕೊಂಡರು.

ನಡಹಳ್ಳಿ ಅವರ ಆಪ್ತರಾದ ಅಪ್ಪುಗೌಡ ಮೈಲೇಶ್ವರ, ಶ್ರೀಶೈಲ ದೊಡಮನಿ (ರೂಢಗಿ), ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಗೌರಮ್ಮ ಹುನಗುಂದ (ಬಲದಿನ್ನಿ), ಶಾಂತಪ್ಪ ಕಮತ, ಸಂತೋಷ ಬಾದರಬಂಡಿ, ವಿಕ್ರಮ್ ಓಸ್ವಾಲ್, ಬಸವ ಪುರಾಣ ಪ್ರವಚನ ಸಮಿತಿಯ ಪ್ರಭುರಾಜ ಕಲಬುರ್ಗಿ, ಸಿ.ಪಿ.ಸಜ್ಜನ, ಗುರುಲಿಂಗಪ್ಪಗೌಡ ಪಾಟೀಲ, ಶ್ರೀಕಾಂತ ಹಿರೇಮಠ, ಡಾ.ವೀರೇಶ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net