

ಶಿಗ್ಗಾಂವಿ: ಪಟ್ಟಣದಲ್ಲಿರುವ ಮಾಜಿ ಸಂಸದ ಮಂಜುನಾಥ ಕುನ್ನೂರ ಅವರ ನಿವಾಸಕ್ಕೆ ಶನಿವಾರ ಆಗಮಿಸಿದ್ದ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹಾಗೂ ರಾಹುಲ್ ಜಾರಕಿಹೊಳಿ ಅವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜು ಕುನ್ನೂರ ಸನ್ಮಾನಿಸಿದರು.
ಬಳಿಕ ಮಾತನಾಡಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ರಾಜ್ಯದಲ್ಲಿ ಜನಪರವಾಗಿ ಉತ್ತಮ ಆಡಳಿತ ನೀಡುತ್ತಿದೆ. ಕಾರ್ಯಕರ್ತರು ಹಾಗೂ ಮುಖಂಡರ ನಿರಂತರ ಪರಿಶ್ರಮದ ಫಲವಾಗಿ ಕಾಂಗ್ರೆಸ್ ತಳ ಮಟ್ಟದಿಂದ ಗಟ್ಟಿಗೊಂಡಿದ್ದು, ಮುಂಬರುವ ದಿನಗಳಲ್ಲಿ ಪಕ್ಷದ ಇನ್ನೂ ಹೆಚ್ಚಿನ ಬಲವರ್ಧನೆಗೆ ನಾವೆಲ್ಲರೂ ಶ್ರಮಿಸಬೇಕು ಎಂದರು.
ಚಂದನ ಕುನ್ನೂರ, ಈರಣ್ಣ ಬಡ್ಡಿ, ಮಂಜುನಾಥ ಯಲಿಗಾರ, ಶಿವಾನಂದ ಬಾಗೂರ, ಚಂದ್ರಶೇಖರ ಜುಟ್ಟಲ್, ಅಕ್ಷಯ ಹೊಂಬಾಳಿಮಠ, ಸೈಪು ಹುಲಿಕಟ್ಟಿ, ಸಾಧಿಕ ಮಲ್ಲೂರ, ಶರಣ ಹಲಸೂರು, ಅಜೀಮ್ ಮಿರ್ಜಾ, ಇತರರಿದ್ದರು.