

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಾರ್ಗಿಲ್ ವಿಜಯೋತ್ಸವ ನಿಮಿತ್ತ ಬಿಜೆಪಿ ಯುವ ಮೋರ್ಚಾ ವತಿಯಿಂದ ಶುಕ್ರವಾರ ರಾತ್ರಿ ಪಂಜಿನ ಮೆರವಣಿಗೆ ನಡೆಸಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಲಾಯಿತು.
ನಗರದ ಉಳವಿ ಚನ್ನಬಸವೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿ ಆಚರಣದಲ್ಲಿನ
ಕಾರ್ಗಿಲ್ ಸ್ತೂಪವರೆಗೆ ಪಂಜಿನ ಮೆರವಣಿಗೆ ನಡೆಸಿದರು. ಬಳಿಕ ಸ್ತೂಪದಲ್ಲಿ ಹುತಾತ್ಮ, ವೀರ ಯೋಧರಿಗೆ ನಮನ ಸಲ್ಲಿಸಿದರು.
ಮಾಜಿ ಮೇಯರ್ ಈರೇಶ ಅಂಚಟಗೇರಿ ಮಾತನಾಡಿ, ಕಾರ್ಗಿಲ್ ವಿಜಯೋತ್ಸವಕ್ಕೆ 25 ವರ್ಷಗಳಾಗಿವೆ. 500ಕ್ಕೂ ಹೆಚ್ಚು ಯೋಧರು ತಮ್ಮ ಪ್ರಾಣಾರ್ಪಣೆ ಮಾಡಿ ಭಾರತದ ದಿಗ್ವಿಜಯಕ್ಕೆ ಕಾರಣೀಭೂತರಾಗಿದ್ದು, ಇವರಿಂದ ಕಾಶ್ಮೀರ ಇಂದಿಗೂ ಭಾರತದ ಭಾಗವಾಗಿ ಉಳಿಯಲು ಸಾಧ್ಯವಾಗಿದೆ ಎಂದರು.
ಟಿ.ಎಸ್.ಪಾಟೀಲ, ವಿಜಯಾನಂದ ಶೆಟ್ಟಿ, ಶಕ್ತಿ ಹಿರೇಮಠ, ಬಸವರಾಜ ಗರಗ, ಪವನ ಥಿಟೆ, ರಾಹುಲ ಮಲ್ಲಿಗವಾಡ, ಯುವ ಮೋರ್ಚಾ ಕಾರ್ಯಕರ್ತರು, ಇತರರು ಇದ್ದರು.