ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಿಗೆ ಶ್ರದ್ದಾಂಜಲಿ

19
Published on

ಮೈಸೂರು: ನಗರದ ಚಾಮುಂಡಿಪುರಂ ವೃತ್ತದಲ್ಲಿ ಶ್ರೀರಾಮ ಗೆಳೆಯರ ಬಳಗದಿಮದ ದೇಶಪ್ರೆಮ ದಿನ ಹಾಗೂ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಿ ಕರಾಳ ದಿನ ಆಚರಿಸಲಾಯಿತು.
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರ ಭಾವಚಿತ್ರ ಹಿಡಿದು ಮೇಣದಬತ್ತಿ ಬೆಳಗಿಸಿ ಅವರ ತ್ಯಾಗ ಬಲಿದಾನವನ್ನು ಸ್ಮರಿಸಲಾಯಿತು. ವಿಶ್ವ ದೇಶಪ್ರೆಮಿಗಳಿಗೆ ಜಯವಾಗಲಿ, ಭಾರತ್ ಮಾತಾಕಿ ಜೈ ವಂದೇ ಮಾತರಂ ,ವೀರ ಯೋಧರು ಅಮರರಾಗಲಿ ,ಸೆನಿಕರ ದಿನಾಚರಣೆ ಗೆ ಜಯವಾಗಲಿ ಎಂಬ ಘೋಷಣೆಗಳನ್ನು ಕೂಗಲಾಯಿತು.
ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಸಿ.ಸಂದೀಪ್ ಮಾತನಾಡಿ, ಭಾರತ ದೇಶ ಪುರಾತನವಾದದ್ದು, ಪ್ರೇಮ ದಿನಾಚರಣೆ ನಮ್ಮ ಸಂಸ್ಕೃತಿಯಲ್ಲ. ಪ್ರೀತಿ, ಪ್ರೇಮ ಎನ್ನುವುದು ತಂದೆ -ತಾಯಿ .ಗುರು- ಹಿರಿಯರು .ದೇಶದ ಬೆನ್ನಲುಬಾದ ಸೈನಿಕರು ಮತ್ತು ರೈತರ ಮೇಲೆ ಇರಬೇಕು .ಅರ್ಥವಿಲ್ಲದ ಪ್ರೆಮಿಗಳ ದಿನಾಚರಣೆ ಸಲ್ಲದು ಎಂದರು
ಶ್ರೀರಾಮ ಗೆಳೆಯರ ಬಳಗದ ಬಸವರಾಜು(ಬಸಪ್ಪ), ಬಸವರಾಜು, ಲಕ್ಷಣ್, ಮಹೇಶ್, ಅಜಯ್ ಶಾಸ್ತ್ರಿ, ಕಿಶೋರ್, ನಿತೀನ್ , ಧರ್ಮೇಂದ್ರ, ರಾಜೇಂದ್ರ, ಶ್ರೀಧರ್, ಪುರುಷೋತ್ತಮ್, ಗಿರಿ, ಶೇಖರ್, ಸುರೇಶ್, ಭಾಸ್ಕರ್, ಅಜ್ಗಾರ್, ಸುರೇಂದರ್, ಅಭಿನವ್, ದಿನೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net