ಹುತಾತ್ಮ ಯೋಧರಿಗೆ ಸನ್ಮಾನ

prajavani_2025-02-14_6k9igrbk_file7zd4qomyhn414xtdgk9p.jpeg
Published on

ಬೆಳಗಾವಿ: 2019ರ ಫೆ.14ರಂದು ಜಮ್ಮು- ಕಾಶ್ಮೀರದ ಪುಲ್ವಾಮಾ ಸೆಕ್ಟರ್‌ನಲ್ಲಿ ಅರೆಸೇನಾಪಡೆಯ ಸಿಆರ್‌ಪಿಎಫ್‌ನ ವಾಹನದ ಮೇಲೆ ಉಗ್ರವಾದಿಗಳು ದಾಳಿ ನಡೆಸಿ, 46 ಯೋಧರು ಹುತಾತ್ಮರಾದರು. ಅವರ ಸ್ಮರಣಾರ್ಥ ಜಿಲ್ಲೆಯ ಮಾಜಿ ಸೈನಿಕರ ಸಂಘಟನೆಗಳ ಮಹಾ ಒಕ್ಕೂಟದ ವತಿಯಿಂದ ಹಾಗೂ ಮಹಾ ಒಕ್ಕೂಟದ ಮಹಿಳಾ ಸಂಘಟನೆಯ ವತಿಯಿಂದ ನಗರದ ಚನ್ನಮ್ಮ ಸರ್ಕಲ್‌ನಲ್ಲಿ ಮೇಣದಬತ್ತಿ ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮೇಣದಬತ್ತಿ ಹಿಡಿದು ರಾಣಿ ಚನ್ನಮ್ಮ ಸರ್ಕಲ್‌ನಲ್ಲಿ ಸೇರಿದ ಜನ ದೇಶಭಕ್ತಿಯ ಘೋಷಣೆಗಳೊಂದಿಗೆ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಮಹಾ ಒಕ್ಕೂಟದ ಅಧ್ಯಕ್ಷ ಜಗದೀಶ ಪೂಜೇರಿ, ಗೌರವಾಧ್ಯಕ್ಷ ರಮೇಶ ಚೌಗಲಾ, ಉಪಾಧ್ಯಕ್ಷ ಸಂಗಪ್ಪ ಮೇಟಿ, ಶಿವಬಸಪ್ಪ ಕಾಡನ್ನವರ, ಮಡಿವಾಳಪ್ಪ ಕಲಬಾವಿ, ಸಂತೋಷ್ ಮಠಪತಿ, ಅಶೋಕ ಮಜಗಿ, ಸಿ.ವಿ. ಸವಡಿ, ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಪಟ್ಟಣಶೆಟ್ಟಿ, ಉಪಾಧ್ಯಕ್ಷೆ ವೈಶಾಲಿ ಸುದಾಗಡೆ, ಪ್ರತಿಭಾ ಬಂಡಿ, ಸಂತೋಷಕಲಾ ಕುಂಬಾರ, ಉಷಾ ದೇಸಾಯಿ, ಸಾವಿತ್ರಿ ಜಮಾದಾರ ಮುಂತಾದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net