ಹುತಾತ್ಮ ಪ್ರಾಂಜಲ್‌ಗೆ ನಮನ

Tribute to Martyr Prangle
Published on

ಮಡಿಕೇರಿ:

ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವಿನ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ವೀರ ಯೋಧ ೬೩ ರಾಷ್ಟ್ರೀಯ ರೈಫಲ್‌ನ ಎಂ.ವಿ. ಪ್ರಾಂಜಲ್ ಅವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆ ವತಿಯಿಂದ ಬುಧವಾರ ಇಲ್ಲಿನ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ನಮನ ಸಲ್ಲಿಸಲಾಯಿತು.
ಎಂ.ವಿ. ಪ್ರಾಂಜಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಿ, ಎಂ.ವಿ.ಪ್ರಾAಜಲ್ ಅವರ ದೇಶ ಸೇವೆ ಹಾಗೂ ಕರ್ತವ್ಯ ನಿಷ್ಠೆ ಕುರಿತು ಗುಣಗಾನ. ಮಾಡಲಾಯಿತು.

ಈ ವೇಳೆ ಮಾತನಾಡಿದ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ. ಬೇಬಿಮ್ಯಾಥ್ಯೂ,
ಬಾಲ್ಯದಿಂದಲೂ ಪ್ರಾಂಜಲ್ ಅವರು ಸೈನ್ಯಕ್ಕೆ ಸೇರುವ ಕನಸು ಕಂಡಿದ್ದರು, ತಮ್ಮ ಗುರಿಗೆ ಸಮರ್ಪಿತರಾಗಿದ್ದರು. ಸ್ಕೌಟ್ ಆಗಿ, ಅವರ ಬದ್ಧತೆ ಅಚಲವಾಗಿತ್ತು. ಅವರು ದೇಶಕ್ಕೆ ಸೇವೆ ಸಲ್ಲಿಸಲು ಹೆಮ್ಮೆಪಡುತ್ತಿದ್ದರು ಎಂದರು.

ಸ್ಕೌಟ್ಸ್ , ಗೈಡ್ಸ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ಬೊಳ್ಳಜಿರ ಅಯ್ಯಪ್ಪ, ಖಜಾಂಚಿ ಪುಷ್ಪವೇಣಿ, ಸ್ಥಾನಿಕ ಆಯುಕ್ತ ಎಚ್.ಆರ್. ಮುತ್ತಪ್ಪ, ಗೈಡ್ಸ್ ಸಂಸ್ಥೆಯ ಸಹಾಯಕ ಆಯುಕ್ತೆ ಸಿ.ಎಂ. ಸುಲೋಚನಾ, ಸಹ ಕಾರ್ಯದರ್ಶಿ ಕುಟ್ಟಪ್ಪ, ಸಂಸ್ಥೆಯ ಸಂಪಾಜೆ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಧನಂಜಯ, ಸಂಸ್ಥೆಯ ಜಿಲ್ಲಾ ಸಂಘಟಕಿ ಯು.ಸಿ. ದಮಯಂತಿ, ಗೈಡ್ ಕ್ಯಾಪ್ಟನ್ ಗಾಯನ, ಇನ್ನಿತರ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net