

ಮಧೂರು: ವಿಶ್ವ ಪಿಂಚಣಿದಾರರ ದಿನಾಚರಣೆ ಅಂಗವಾಗಿ ಬುಧವಾರ ಯಕ್ಷಗಾನ ಕಲಾವಿದ ಹಾಗೂ ನಿವೃತ್ತ ಶಿಕ್ಷಕ ಬಾಲಚಂದ್ರ ಕಲ್ಲೂರಾಯ ಮಧೂರು ಅವರನ್ನು ಮಧೂರಿನಲ್ಲಿರುವ ಸ್ವಗೃಹದಲ್ಲಿ ಕೇರಳ ಸ್ಟೇಟ್ ಪೆನ್ಶನರ್ಸ್ ಸಂ ಮಧೂರು ಟಕದ ವತಿಯಿಂದ ಸನ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಟಕದ ಅಧ್ಯಕ್ಷ ಶಿವ ನಾಯ್ಕ ವಹಿಸಿದ್ದರು. ಗೌರವಾಧ್ಯಕ್ಷರಾದ ಕಕ್ಕೆಪಾಡಿ ವಿಷ್ಣು ಭಟ್ ಮತ್ತು ನಾರಾಯಣಯ್ಯ, ವಾಜಿ ಅಧ್ಯಕ್ಷ, ಹಾಲಿ ಬ್ಲಾಕ್ ಅಧ್ಯಕ್ಷ ಎಂ.ನಾರಾಯಣ, ಗ್ರಾಮ ಪಂಚಾಯಿತಿ ನಿವೃತ್ತ ಕಾರ್ಯದರ್ಶಿ ಹಾಗೂ ಬ್ಲಾಕ್ ಕಾರ್ಯದರ್ಶಿ ಬಲರಾಮ್ ಭಟ್, ಹಿರಿಯರಾದ ಬಾಲಕೃಷ್ಣ ಉಳಿಯ, ವಂದನಾ ಮತ್ತು ಪ್ರೇಮಲತಾ ಶುಭಹಾರೈಸಿದರು. ಕಾರ್ಯದರ್ಶಿ ನೂತನಾ ಕುವಾರಿ ಸ್ವಾಗತಿಸಿದರು. ಸತ್ಯನಾರಾಯಣ ತಂತ್ರಿ ನಿರೂಪಿಸಿದರು. ಲೀಲಾವತಿ ವಂದಿಸಿದರು.