ಲಕ್ಷ್ಮಿ ನಾರಾಯಣ ನಾಗವಾರಗೆ ಶ್ರದ್ಧಾಂಜಲಿ

04M.D.R.5
ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಲಕ್ಷ್ಮಿ ನಾರಾಯಣ ನಾಗವಾರ ಅವರಿಗೆ ಮದ್ದೂರು ತಾಲೂಕಿನ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಶನಿವಾರ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಿಂಗಪ್ಪ, ರಮಾನಂದ, ಶಂಕರ್, ಕೆ.ಟಿ.ಶಿವಕುಮರ್, ಮಹದೇವು, ಪಿ.ಶಶಿಕುಮಾರ್, ಬೋರಯ್ಯ ಇದ್ದರು.
Published on

ಮದ್ದೂರು : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಲಕ್ಷ್ಮಿ ನಾರಾಯಣ ನಾಗವಾರ ಅವರಿಗೆ ಮದ್ದೂರು ತಾಲೂಕಿನ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಶನಿವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಅಹಿಂದ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಅತಗೂರು ನಿಂಗಪ್ಪ ಮಾತನಾಡಿ, ಲಕ್ಷ್ಮೀ ನಾರಾಯಣ ನಾಗವಾರ ಅವರು 1980ರ ದಶಕದಿಂದ ಇಲ್ಲಿಯವರೆಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಲ್ಲಿ ಜಿಲ್ಲಾ, ರಾಜ್ಯ ಸಂಚಾಲಕರಾಗಿ ದಲಿತ, ಶೋಷಿತರ ಪರವಾಗಿ ಹೋರಾಟ ಮಾಡುವ ಮೂಲಕ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.

ಕದಸಂಸ ಜಿಲ್ಲಾ ಸಂಚಾಲಕ ರಮಾನಂದ ಮಾತನಾಡಿ, ಲಕ್ಷ್ಮಿ ನಾರಾಯಣ ನಾಗವಾರ ಅವರು ಸಮುದಾಯಕ್ಕೆ ತಮ್ಮದೇ ಆದ ರೀತಿಯಲ್ಲಿ ಹೋರಾಟವನ್ನು ರೂಪಿಸುವ ಮೂಲಕ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಕಷ್ಟಗಳಲ್ಲಿ ಭಾಗಿಯಾಗುತ್ತಿದ್ದರು ಎಂದರು.

ಪುರಸಭಾ ಸದಸ್ಯರಾದ ಸುರೇಶ್‌ಕುಮಾರ್, ಪ್ರಮೀಳಾ, ಪ್ರಗತಿಪರ ಸಂಘಟಕ ಕೆ.ಟಿ. ಶಿವಕುಮಾರ್, ಬಿಎಸ್‌ಪಿ ತಾಲೂಕು ಅಧ್ಯಕ್ಷ ಬೋರಯ್ಯ, ಕದಸಂಸ ಜಿಲ್ಲಾ ಸಂಚಾಲಕ ಆನಂದ್, ದಲಿತ ಸಮನ್ವಯ ಸಮಿತಿ ಅಧ್ಯಕ್ಷ ಶಂಕರ್, ಅಹಿಂದ ಸಂಘಟನಾ ಕಾರ್ಯದರ್ಶಿ, ಪಿ. ಶಶಿಕುಮಾರ್ ಮುಖಂಡರಾದ ವೈರಮುಡಿ, ಮೂರ್ತಿ, ಮಹಾದೇವ, ಪುಟ್ಟರಾಜು, ಪ್ರಕಾಶ್, ಸಂಪತ್ತು, ಮರಿದೇವರು, ಮುತ್ತುರಾಜ್, ಮಧು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net