

ಗೋಣಿಕೊಪ್ಪಲು: ಕರ್ನಾಟಕ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಅವರನ್ನು ಕೊಡಗು ಪತ್ರಕರ್ತರ ಸಂಘದ ಪೊನ್ನಂಪೇಟೆ ತಾಲೂಕು ಘಟಕ ವತಿಯಿಂದ ಸನ್ಮಾನಿಸಲಾಯಿತು.
ಪೊನ್ನಂಪೇಟೆ ಕ್‌ಗ್ಗಟ್‌ನಾಡು ಹಿರಿಯ ನಾಗರಿಕ ವೇದಿಕೆ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಮ್ಮಿ ಅಣ್ಣಯ್ಯ, ಯಾವುದೇ ಪ್ರಶಸ್ತಿಗೆ ಆಸೆ ಪಡದೆ ಸಮಾಜ ಸೇವೆಯಲ್ಲಿ ನಾನು ತೊಡಗಿದ್ದೇನೆ. ನನ್ನ ಸೇವೆಗಾಗಿ ಪ್ರಶಸ್ತಿ ದೊರಕಲಿದೆ. ಕೊಡಗಿನ ಜನ ಮತ್ತು ಕೊಡವ ಸಮುದಾಯಕ್ಕೆ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ವಿನೋದ್ ಮೂಡಗದ್ದೆ, ತಾಲೂಕು ಘಟಕದ ಅಧ್ಯಕ್ಷ ಕಿರಿಯಮಾಡ ರಾಜ್ ಕುಶಾಲಪ್ಪ, ಉಪಾಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ, ಪತ್ರಕರ್ತ ಚೆಪ್ಪುಡಿರ ರೋಷನ್, ಪತ್ರಿಕಾ ವಿತರಕರಾದ ಮುಕ್ಕಾಟಿರ ಅರುಣ ಇದ್ದರು.