

ಬೆಂಗಳೂರು: ಕಾರ್ಗಿಲ್ ವಿಜಯ್ ದಿವಸ್ ಹಿನ್ನೆಲೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂ, ಪ್ರಿಯಕೃಷ್ಣ ಫೌಂಡೇಶನ್, ಶೀ ಫಾರ್ ಸೊಸೈಟಿ, ಎ 7 ಎಂಟರ್ಟೈನ್ಮೆಂಟ್ ಜಂಟಿಯಾಗಿ ಆಯೋಜಿಸಿದ್ದ ಬೈಕ್ ಹಾಗೂ ಜೀಪ್ ಜಾಥಾಕ್ಕೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಡಾ. ಎನ್.ಕೆ. ಶಿವಣ್ಣ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ದೇಶಕ್ಕಾಗಿ ಸೈನಿಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಾರೆ. ಸೈನಿಕರ ಸಾಹಸ ಜೀವನ ಇಂದಿನ ಯುವಸಮಾಜಕ್ಕೆ ಪ್ರೇರಣೆಯಾಗಬೇಕು. ಭಾರತೀಯ ಯೋಧರು ಪಾಕಿಸ್ತಾನವನ್ನು ಸೋಲಿಸಿ, ಕಾರ್ಗಿಲ್ ಪ್ರದೇಶವನ್ನು ಉಳಿಸಿಕೊಂಡರು. ಕಾರ್ಗಿಲ್ ಯುದ್ದದಲ್ಲಿ ಹೋರಾಡಿದ ಯೋಧರಿಗೆ ಗೌರವ ಮತ್ತು ಮೃತಪಟ್ಟವರಿಗೆ ಶ್ರದ್ದಾಂಜಲಿ ಸಲ್ಲಿಸಬೇಕಾದುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದರು.
ಮಾಣಿಕ್ ಷಾ ಪೆರೇಡ್ ಮೈದಾನದಿಂದ ಆರಂಭಗೊಂಡ ಜಾಥಾದಲ್ಲಿ ಸೈನಿಕರು, ಮಾಜಿ ಸೈನಿಕರು ಹಾಗೂ ಹವ್ಯಾಸಿ ಬೈಕ್ ಸವಾರರು ಸೇರಿ ಸಾವಿರ ಬೈಕರ್ಗಳು ಪಾಲ್ಗೊಂಡಿದ್ದರು. 200 ಅಡಿ ಉದ್ದದ ತ್ರಿವರ್ಣ ಧ್ವಜ ಹಾರಾಡಿಸಲಾಯಿತು. ಗೋವಿಂದರಾಜನಗರ ವಿಧಾನಸಭಾ ೇತ್ರದ ಬಿಜಿಎಸ್ ಆಟದ ಮೈದಾನದಲ್ಲಿ ಜಾಥಾ ಕೊನೆಗೊಂಡಿತು. ಶಾಸಕರಾದ ಎಂ. ಕೃಷ್ಣಪ್ಪ, ಪ್ರಿಯಕೃಷ್ಣ, ಮೇಜರ್ ಜನರಲ್ ಮ್ಯಾಥ್ಯೂ, ಬ್ರಿಗೇಡಿಯರ್ ಆರ್.ಎಸ್. ಬುದ್ದಹಾರ್, ರಂಜಿತ್ ಆಳ್ವ, ಕರ್ನಲ್ ಪುನೀತ್ ಕುಮಾರ್, ಭಾರದ್ವಾಜ್, ವೆಟರನ್ ಕರ್ನಲ್ ಅವಿನ್ ಉತ್ತಯ್ಯ ಇತರರಿದ್ದರು.