

ಬೇಲೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಅಂಗವಾಗಿ ಪಟ್ಟಣದ ಕೋಟೆ ಬಯಲು ರಂಗ ಮಂದಿರದಲ್ಲಿ ತಾಲೂಕು ಬ್ರಾಹ್ಮಣ ಮಹಾಸಭಾದಿಂದ ಶ್ರೀರಾಮ, ಲಕ್ಷ್ಮಣ, ಸೀತೆಯರ ವಿಗ್ರಹಗಳನ್ನು ಪೂಜಿಸಿ ಕರಸೇವಕರನ್ನು ಸನ್ಮಾನಿಸಲಾಯಿತು.
ರಾಮಮಂದಿರ ನಿರ್ಮಾಣಕ್ಕಾಗಿ ಅಯೋಧ್ಯೆಗೆ ಕರಸೇವಕರಾಗಿ ತೆರಳಿದ್ದ ಪಟ್ಟಣದ ತಾರಾನಾಥ್, ಮಜ್ಜಿಗೆ ಚಂದ್ರಶೇಖರ್, ದುಗ್ಗೇಗೌಡ, ವಿಷ್ಣುವರ್ಧನ ಹಾಗೂ ಅರ್ಚಕ ಶಿವಾನಂದ ಅವರನ್ನು ಸನ್ಮಾನಿಸಲಾಯಿತು. ಅಯೋಧ್ಯೆಯಲ್ಲಿ ಜರುಗಿದ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ವೀಕ್ಷಿಸಲು ದೇಗುಲ ಮುಂಭಾಗ ಎಲ್‌ಇಡಿ ವ್ಯವಸ್ಥೆ ಮಾಡಲಾಗಿತ್ತು. ಶಾಸಕ ಎಚ್.ಕೆ.ಸುರೇಶ್, ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ವಿಕಯ ಕೇಶವ, ಕಾರ್ಯದರ್ಶಿ ಸುಬ್ರಹ್ಮಣ್ಯ, ಚಿಂತಕ ವಿಶ್ವನಾಥಶರ್ಮ, ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ಸಮಾಜದ ತೋ.ಚ.ಅನಂತ ಸುಬ್ಬರಾಯ, ಶ್ರೀಹರಿ, ಜಾವಗಲ್ ಪ್ರಸನ್ನ ಇತರರಿದ್ದರು.