16ಕ್ಕೆ ಕೊಪ್ಪದಲ್ಲಿ ಎಚ್.ಟಿ.ರಾಜೇಂದ್ರಗೆ ನಡಿ ನಮನ

kpp 1 (2)
Published on

ಕೊಪ್ಪ: ಇತ್ತೀಚೆಗೆ ನಿಧನರಾದ ಮಲೆನಾಡಿನ ಹಿರಿಯ ಮುತ್ಸದ್ದಿ ಎಚ್.ಟಿ.ರಾಜೇಂದ್ರ ಅವರಿಗೆ ಶೃಂಗೇರಿ ಕ್ಷೇತ್ರ ಮಟ್ಟದಲ್ಲಿ ಆ.16 ರಂದು ಬೆಳಗ್ಗೆ 10 ಗಂಟೆಗೆ ಎಂ.ಎಸ್.ದ್ಯಾವೇಗೌಡ ಸ್ಮಾರಕ ಒಕ್ಕಲಿಗರ ಸಮುದಾಯ ಭವನದಲ್ಲಿ ನುಡಿ ನಮನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ನುಡಿ ನಮನ ಸಮಿತಿ ಅಧ್ಯಕ್ಷ ಎಚ್.ಜಿ.ವೆಂಕಟೇಶ್‌ತಿಳಿಸಿದರು.

ಬಾಳಗಡಿಯ ಒಕ್ಕಲಿಗರ ಸಮುದಾಯ ಭವನದಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ರಾಜೇಂದ್ರ ಅವರ ಅಗಲಿಕೆ ಸಮಾಜಕ್ಕೆ ಮರೆಯಲಾಗದ ಸಂಕಟವಾಗಿದೆ. ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್, ಮುಂಡರಗಿ ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮೀಜಿ, ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಶಾಸಕ ಡಿ.ಎನ್.ಜೀವರಾಜ್, ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಸುಧಾಕರ ಶೆಟ್ಟಿ, ಬಿಎಸ್‌ಪಿ ರಾಜ್ಯ ಮುಖಂಡ ಕೆ.ಎಂ.ಗೋಪಾಲ್, ಬಿ.ರಾಜಶೇಖರ ಮೂರ್ತಿ ಭಾಗವಹಿಸಲಿದ್ದಾರೆ ಎಂದರು.

ಸಮಿತಿ ಪದಾಧಿಕಾರಿಗಳಾದ ಎಲ್.ಎಂ.ಪ್ರಕಾಶ್ ಕೌರಿ, ಖಾಂಡ್ಯ ವೆಂಕಟೇಶ್, ಅಸಗೋಡು ನಾಗೇಶ್, ನಾರಾಯಣ ಸ್ವಾಮಿ, ಬಿ.ಎನ್.ಅನಂದ ಬೆಳಗೊಳ, ಮಮತಾ ಸಾಯಿನಾಥ್, ಬೆಳ್ಳಪ್ಪ ಗೌಡ, ಶ್ರೀನಿಧಿ, ಎಚ್.ಕೆ.ಸುರೇಶ್ ಹೊಸೂರ್, ಗಣೇಶ್ ಬಲಗಾರ್, ನುಗ್ಗಿ ಮಂಜುನಾಥ್, ರಾಜಶಂಕರ್, ಪ್ರಕಾಶ್ ಪೂಜಾರಿ, ಕೆ.ಎನ್.ಪ್ರಸನ್ನ ಶೆಟ್ಟಿ, ಅನಿಲ್ ಹೊಸಕೊಪ್ಪ, ಮಹಮ್ಮದ್ ಬದ್ರಿಯಾ, ರಾಮಣ್ಣ ಭಂಡಾರಿ, ಶಿವಪುರ ಹರೀಶ್, ಜೆ.ಎಂ.ಶ್ರೀಹರ್ಷ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net