

ಮಡಿಕೇರಿ:
ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ ರೋಟರಿ ಮಿಸ್ಟಿ ಹಿಲ್ಸ್, ಕೊಡಗು ಜಾನಪದ ಪರಿಷತ್ ಹಾಗೂ ಕೊಡಗು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಮಹಾತ್ಮ ಗಾಂಧೀಜಿಗೆ ಗಾನನಮನ ಕಾರ್ಯಕ್ರಮ ನಗರದ ಗಾಂಧಿ ಭವನದಲ್ಲಿ ಅರ್ಥಪೂರ್ಣವಾಗಿ ನಡೆಯಿತು.
ಮಡಿಕೇರಿಯ ೨೨ ಗಾಯಕ, ಗಾಯಕಿಯರು ಗಾನನಮನದಲ್ಲಿ ಪಾಲ್ಗೊಂಡು ಮಹಾತ್ಮ ಗಾಂಧೀಜಿಗೆ ಪ್ರಿಯವಾಗಿದ್ದ ದೇಶಭಕ್ತಿಗೀತೆ, ಕೀರ್ತನೆ, ಭಜನೆ, ತತ್ಪಪದಗಳನ್ನು ಹಾಡಿದ್ದು ವಿಶೇಷವಾಗಿತ್ತು ಮಡಿಕೇರಿಯ ಶೃತಿ ಲಯ ತಂಡದ ವೀಣಾ ಹೊಳ್ಳ, ಲಕ್ಷ್ಮಿ ಈಶ್ವರ ಭಟ್, ಮಮತಾಶಾಸ್ತ್ರಿ, ತನುಶ್ರೀ, ಸ್ವಾತಿ ಅರುಣ್, ಸವಿತಾ ಗುರುಪ್ರಸಾದ್, ಆರತಿ, ಸುಧಾ ಎಸ್ ಪ್ರಸಾದ್. ವಿಜಯ ವಿನಾಯಕ ಭಜನಾ ಮಂಡಳಿಯ ಗಾಯಕಿಯರಾದ ಅರವಿಂದ್ ಅಣ್ಣಪ್ಪ, ಮೀರಾ, ಶಾಂತಿ ಅಚ್ಚಯ್ಯ, ಪ್ರೇಮರಾಘವಯ್ಯ, ವಿಜಯಗೋಪಾಲಕೃಷ್ಣ ಭಟ್, ವೇದಾಶೆಟ್ಟಿ, , ಭಕ್ತಿಗೀತೆ, ಕೀರ್ತನೆಗಳನ್ನು ಹಾಡಿದರೆ, ಜಿ. ಚಿದ್ವಿಲಾಸ್, ಸಂಧ್ಯಾ ಚಿದ್ವಿಲಾಸ್, ವಂದನಾ ಪೊನ್ನಪ್ಪ, ಚಿತ್ರಾ ನಂಜಪ್ಪ, ಎ. ಹೇಮಾನಿ , ಮಂಜುಳ ರಾಮಕೃಷ್ಣ ಭಟ್, ದೇಶಭಕ್ತಿ ಗೀತೆಗಳನ್ನು ಹಾಡಿದರು. ಬಿ ಜಿ. ಅನಂತಶಯನ, ಗೀತಾ ಸಂಪತ್ ಕುಮಾರ್, ಶಾಂತಿ ಅಚ್ಚಯ್ಯ, ಜಯಲಕ್ಷ್ಮಿ ಕೆ, ಚಿತ್ರಾ ಆರ್ಯನ್, ನಾಡು, ನುಡಿ ಸಂಸ್ಕೃತಿ ಬಿಂಬಿಸುವ ಹಾಡು ಹೇಳಿದರು.
ಕಗ್ಗದ ಸಾಲಿನ ಮೂಲಕ ಎಸ್.ಐ.ಮುನೀರ್ ಅಹಮ್ಮದ್ ಗಮನಸೆಳೆದರೆ, ಯುವಗಾಯಕ,ಗಾಯಕಿಯರಾದ ಅಮೃತ್ ರಾಜ್, ಅನಿತ್ ರಾಜ್, ಗಾಯತ್ರಿ ಚೆರಿಯಮನೆ, ಸುಮನಾ ಶ್ರೀಹರಿ, ಭಾವಗೀತೆ ಹಾಡಿದರು. . ಪುಟಾಣಿಗಳಾದ ಸುಮೇಧಾ ರಾವ್, ಮಿನುಗು ಎಸ್ ಭಜನೆಯ ಮೂಲಕ ಗಮನ ಸೆಳೆದರು.
ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ, ನಗರದ ಗಾಯಕ, ಗಾಯಕಿಯರನ್ನು ಒಟ್ಟುಗೂಡಿಸಿ ವಿಭಿನ್ನ ರೀತಿಯ ಗಾಯನ ಕಾರ್ಯಕ್ರಮ ಆಯೋಜಿಸುವ ಮೂಲಕ ಹೊಸದೊಂದು ಕಾರ್ಯಕ್ರಮಕ್ಕೆ ತಾಲೂಕು ಜಾನಪದ ಪರಿಷತ್ ನಾಂದಿ ಹಾಡಿದೆ. ಇಂಥ ಪ್ರಯತ್ನಗಳು ಭವಿಷ್ಯದಲ್ಲಿಯೂ ವಿವಿಧ ಸಂಘಸಂಸ್ಥೆಗಳಿಂದ ಮುಂದುವರೆಯಂತಾಗಬೇಕು ಎಂದು ಆಶಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ನಗರಸಭಾಧ್ಯಕ್ಷೆ ಅನಿತಾಪೂವಯ್ಯ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾರ್ಯದರ್ಶಿ ರತ್ನಾಕರ್ ರೈ, ಸಹಾಯಕ ಗವರ್ನರ್ ದೇವಣಿರ ತಿಲಕ್, ನಿರ್ದೇಶಕ ಜಿ. ಆರ್. ರವಿಶಂಕರ್, ರೋಟರಿ ವುಡ್ಸ್ ನ ವಲಯ ಸೇನಾನಿ ಸಂಪತ್ ಕುಮಾರ್, ನಿರ್ದೇಶಕಿ ಪದ್ಮಗಿರಿ, ಕೊಡಗು ವಿದ್ಯಾಲಯದ ವ್ಯವಸ್ಥಾಪಕ ರವಿ, ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ ಕುಶಾಲಪ್ಪ, ಪ್ರಮುಖರಾದ ಟಿ.ಪಿ.ರಮೇಶ್, ನವೀನ್ ಅಂಬೆಕಲ್ ಮತ್ತಿತರರು ಇದ್ದರು.