ಗೋವಿಂದ ಉರಾಳರಿಗೆ ಗೌರವ

shanthimathi
ಕೋಟದ ಗೋವಿಂದ ಉರಾಳರಿಗೆ ಶಾಂತಿಮತಿ ಪ್ರತಿಷ್ಠಾನದ ಗೌರವ ನೀಡಲಾಯಿತು.
Published on

ಕೋಟ: ಶ್ರೀ ಶಾಂತಿಮತಿ ಪ್ರತಿಷ್ಠಾನದ ಸಾಧಕರೆಡೆ ನಮ್ಮ ನಡೆ ತಿಂಗಳ ಕಾರ್ಯಕ್ರಮ ಇತ್ತೀಚೆಗೆ ಕೋಟದ ಗೋವಿಂದ ಉರಾಳರ ಮನೆಯಲ್ಲಿ ನಡೆಯಿತು.

ಯಕ್ಷಗಾನದಲ್ಲಿ ಸಾಧನೆಗೈದ ಗೋವಿಂದ ಉರಾಳರನ್ನು ಗೌರವಿಸಲಾಯಿತು. ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಕೋಟ ಸುಜಯೀಂದ್ರ ಹಂದೆ, ಸ್ಥಳೀಯರಾದ ಆನಂದರಾಮ ಉರಾಳ ಉಪಸ್ಥಿತರಿದ್ದರು. ಚಂದ್ರಶೇಖರ ಅಡಿಗ ಸ್ವಾಗತಿಸಿದರು. ಡಾ.ವಿಜಯ್ ಮಂಜರ್ ಪ್ರಸ್ತಾವನೆಗೈದರು. ಸಚ್ಚಿದಾನಂದ ಅಡಿಗ ವಂದಿಸಿದರು. ರಾಮಚಂದ್ರ ಉಡುಪ ನಿರೂಪಿಸಿದರು. ಗೋವಿಂದ ಉರಾಳರ ಕುಟುಂಬಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net