

ಮಡಿಕೇರಿ: ಮಾಜಿ ಶಾಸಕ ಕೆ.ಜಿ.ಬೋಪಯ್ಯರವರ ನಿವಾಸಕ್ಕೆ ಭೇಟಿ ನೀಡಿದ ಅಪ್ಪಚೆಟ್ಟೋಳಂಡ ಹಾಕಿ ಉತ್ಸವ ಸಮಿತಿ ಪ್ರಮುಖರು, ರೂ.೧ ಕೋಟಿ ಅನುದಾನ ಬಂದ ಹಿನ್ನೆಲೆ ಕುಟುಂಬದ ವತಿಯಿಂದ ಶಾಸಕರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಹಾಕಿನಮ್ಮೆಯ ಸಂಚಾಲಕ ಅಪ್ಪಚೆಟ್ಟೋಳಂಡ ಮನುಮುತ್ತಪ್ಪ, ಉಪಾಧ್ಯಕ್ಷ ಭೀಮಯ್ಯ ದೇವಯ್ಯ, ಪ್ರಮುಖರಾದ ಪೂ ದೇವಯ್ಯ, ಡಾಲಿ ಬೋಪಯ್ಯ, ಶ್ಯಾಂ ಕಾಳಯ್ಯ, ರವಿ ಮೊಣ್ಣಪ್ಪ, ಜನತ್ ಕುಮಾರ್, ಎ.ಕೆ.ಸೋಮಯ್ಯ, ಎ.ಕೆ.ತಿಮ್ಮಯ್ಯ, ಎ.ಬಿ.ಉದಯ, ಎ.ಕೆ.ಜೋಯಪ್ಪ, ವಸಂತ್ ಮುತ್ತಪ್ಪ ಇತರರು ಉಪಸ್ಥಿತರಿದ್ದರು.