ಯುವಜನತೆ ದೇಶಪ್ರೇಮ ಬೆಳೆಸಿಕೊಳ್ಳಬೇಕು

18 Dwd 5
Published on

ಧಾರವಾಡ: ವಿದ್ಯಾರ್ಥಿಗಳು ಸಿನಿಮಾ ನೋಡುವಷ್ಟೇ ಆಸಕ್ತಿಯಿಂದ ದೇಶಭಕ್ತಿಯ ವಿಷಯವನ್ನು ಅಧ್ಯಯನ ಮಾಡಬೇಕು. ದೇಶಪ್ರೇಮ ನಮ್ಮ ನರನಾಡಿಯಲ್ಲಿ ಹರಿಯಬೇಕು ಎಂದು ಮಾಜಿ ಯೋಧ ಹಾಗೂ ಕೆಎಎಸ್ ಅಽಕಾರಿ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಹೇಳಿದರು.
ನಗರದ ವಿದ್ಯಾಗಿರಿಯ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಹಾಗೂ ಮಾನವ ಹಕ್ಕುಗಳು ಸಂಘ ಮತ್ತು ಎನ್‌ಎಸ್‌ಎಸ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ `ಮೇರಿ ಮಾಠಿ ಮೇರಾ ದೇಶ' (ನನ್ನ ಮಣ್ಣು ನನ್ನ ದೇಶ) ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕಾರ್ಗಿಲ್‌ನಂಥ ಅತಿ ಶೀತ ಪ್ರದೇಶದಲ್ಲಿ ಯೋಧರು ದಿನದ ೨೪ ಗಂಟೆ ಪಹರೆ ಕಾಯಬೇಕು. ಅತಿ ಹೆಚ್ಚು ಹಿಮಪಾತವಾಗುವ ಪ್ರದೇಶದಲ್ಲಿ ಪ್ರಾಣದ ಹಂಗು ತೊರೆದು ಯೋಧನು ದೇಶವನ್ನು ಕಾಯುತ್ತಾರೆ. ಅಂಥವರನ್ನು ನಾವು ಸದಾ ಸ್ಮರಿಸಬೇಕು ಎಂದರು.
ಬ್ರಿಟಿಷ್ ಆಡಳಿತದಲ್ಲಿ ದೇಶಕ್ಕೆ ಮಾರಕವಾಗಿದ್ದ ಕಾನೂನುಗಳು, ಶಿವಾಜಿ ಮಹಾರಾಜರ ಹೋರಾಟವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.
ಈ ವೇಳೆ ನಿವೃತ್ತ ಯೋಧರಾದ ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಬಸಪ್ಪ ಉದಮೇಶಿ, ಮನೋಹರ ಬಡಿಗೇರ, ನಿಂಗಪ್ಪ ಶಿಂಗೋಟಿ ಅವರನ್ನು ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಸನ್ಮಾಸಿಸಿದರು.
ಡಾ. ಸೂರಜ್ ಜೈನ್, ಮಹಾವೀರ ಉಪಾಧ್ಯೆ, ಡಾ. ರಾಜೇಶ ಚಿಟಗುಪ್ಪಿ ಉಪಸ್ಥಿತರಿದ್ದರು. ಮಹಿಮಾ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಂತ ದೇಸಾಯಿ ನಿರೂಪಿಸಿದರು. ಡಾ. ರೋನಿಲ್ ಮನೋಹರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net