ಡಿ.ಯದುಪತಿ ಗೌಡಗೆ ಗೌರವಾರ್ಪಣೆ

New Project (21)
Published on

ಬೆಳ್ತಂಗಡಿ: ವಾಣಿ ಪದವಿಪೂರ್ವ ಕಾಲೇಜಿನಲ್ಲಿ 21 ವರ್ಷ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಡಿ.ಯದುಪತಿ ಗೌಡ ಅವರನ್ನು ಯುವ ವೇದಿಕೆ ಹಾಗೂ ಮಹಿಳಾ ವೇದಿಕೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆಳ್ತಂಗಡಿ, ಸ್ಪಂದನಾ ಸೇವಾ ಸಂಘ ಬೆಳ್ತಂಗಡಿ ಮತ್ತು ಪ್ರಗತಿ ಸ್ವ ಸಹಾಯ ಸಂಘ ಬೆಳ್ತಂಗಡಿ ಆಶ್ರಯದಲ್ಲಿ ಸನ್ಮಾನಿಸಲಾಯಿತು.

ಯುವ ವೇದಿಕೆ ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೆ ಅಧ್ಯಕ್ಷತೆ ವಹಿಸಿದ್ದರು. ಯುವ ವೇದಿಕೆ ಸಲಹೆಗಾರ ಮೋಹನ ಗೌಡ ಕೊಯ್ಯೂರು, ಪ್ರಧಾನ ಕಾರ್ಯದರ್ಶಿ ಸುರೇಶ್ ಕೌಡಂಗೆ, ಕೋಶಾಧಿಕಾರಿ ರಂಜಿತ್ ಕಳೆಂಜ, ಜತೆ ಕಾರ್ಯದರ್ಶಿ ತೀಕ್ಷಿತ್ ದಿಡುಪೆ, ಉಪಾಧ್ಯಕ್ಷ ನಿತಿನ್ ಕಲ್ಮಂಜ, ಕಾನೂನು ಸಲಹೆಗಾರ ನವೀನ್ ನಿಡ್ಲೆ, ಸಂಘಟನಾ ಕಾರ್ಯದರ್ಶಿ ಪ್ರಮೋದ್ ದಿಡುಪೆ, ಯಶವಂತ ಡೆಚ್ಚಾರು, ಭರತ್ ಪುದುವೆಟ್ಟು, ಸತೀಶ್ ಬೆಳಾಲು, ಅಕ್ಷಯ್ ಉಜಿರೆ, ಪ್ರಸಾದ್ ಚಾರ್ಮಾಡಿ, ಮಂಜುನಾಥ ಚಾರ್ಮಾಡಿ, ಸಚಿನ್ ಕನ್ಯಾಡಿ, ಶಿವಪ್ರಸಾದ್ ಕಲ್ಮಂಜ, ನಿತೇಶ್ ಬೆಳ್ತಂಗಡಿ, ಸೀತಾರಾಮ್ ಬೆಳಾಲು, ಧನಂಜಯ್ ಕುಮಾರ್ ಪೆರ್ಲ, ಮಹಿಳಾ ವೇದಿಕೆ ಅಧ್ಯಕ್ಷೆ ಗೀತಾ ರಾಮಣ್ಣ ಗೌಡ, ಕಾರ್ಯದರ್ಶಿ ಲೀಲಾ ಬೆಳಾಲು, ದಯಾಮಣಿ ಕೊಯ್ಯೂರು, ಮೀನಾಕ್ಷಿ ಕುವೆಟ್ಟು ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net