

ಮದ್ದೂರು: ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿರುವ ಗ್ರಾಮಾಂತರ ವೃತ್ತ ನಿರೀಕ್ಷಕ ವೆಂಕಟೇಗೌಡ ಅವರನ್ನು ತಾಲೂಕು ಸರ್ಕಾರಿ ನೌಕರ ಸಂಘದ ಪದಾಧಿಕಾರಿಗಳು ಅಭಿನಂದಿಸಿದರು.
ಪಟ್ಟಣ ಪೋಲೀಸ್ ಠಾಣೆಯಲ್ಲಿ ಸೋಮವಾರ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ರವಿ ಹಾಗೂ ಪದಾಧಿಕಾರಿಗಳು ಅಭಿನಂದಿಸಿದರು.
ಹಲವಾರು ವರ್ಷಗಳಿಂದಲೂ ಪೋಲೀಸ್ ಇಲಾಖೆಯಲ್ಲಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ವೆಂಕಟೇಗೌಡ ಅವರನ್ನು ಸರ್ಕಾರ ಗುರುತಿಸಿ ಚಿನ್ನದ ಪದಕ ವಿತರಿಸುತ್ತಿರುವುದು ಸಂತಸದ ವಿಚಾರ ಎಂದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಆಲೂರು ರವಿಕುಮಾರ್ ಹೇಳಿದರು.
ಸಂಘದ ಪದಾಧಿಕಾರಿಗಳಾದ ಯೋಗಾನಂದ, ಶ್ರೀನಿವಾಸ್, ಸತೀಶ್, ಶಿವಣ್ಣ, ಪ್ರಸಿಲ್ಲಾ ಧನಕುಮಾರಿ, ಶಿವನಂಜೇಗೌಡ, ರವಿಚಂದ್ರು, ಮಂಜುನಾಥ್, ರಮೇಶ್, ಎಸ್.ಕೆ.ತಮ್ಮೇಗೌಡ, ಹನುಮಂತು, ರಾಮಲಿಂಗಯ್ಯ ಇತರರಿದ್ದರು.