

ಗಂಗಾವತಿ: ಬಸವ ತತ್ವ ಪ್ರತಿಪಾದಕ ನುಲಿಯ ಚಂದಯ್ಯ ಜಯಂತಿ ನಿಮಿತ್ತ ನಗರದಾದ್ಯಂತ ಗುರುವಾರ ಭಾವಚಿತ್ರದ ಮೆರವಣಿಗೆ ನಡೆಯಿತು.
ತಾಲೂಕು ಕೊರಮ ಸಮಾಜದಿಂದ ನಗರದ 23ನೇ ವಾರ್ಡ್‌ನ ಹುಲಿಗೆಮ್ಮ ದೇವಾಲಯದಲ್ಲಿ ವಿಶೇಷ ಪೂಜೆ, ಸಾಮೂಹಿಕ ಪ್ರಾರ್ಥನೆ ಮತ್ತು ವಚನ ಗಾಯನ ಹಮ್ಮಿಕೊಳ್ಳಲಾಗಿತ್ತು. ಭಾವಚಿತ್ರವನ್ನು ಕಳಸ, ವಾದ್ಯ ಮೇಳದೊಂದಿಗೆ ನಗರದ ಪ್ರಮುಖ ವೃತ್ತಗಳ ಮೂಲಕ ಹುಲಿಗೆಮ್ಮ ದೇವಾಲಯದಲ್ಲಿ ಸಮಾರೋಪಗೊಂಡಿತ್ತು.
ಇದನ್ನೂ ಓದಿ: ನುಲಿಯ ಚಂದಯ್ಯನ ತತ್ವಾದರ್ಶ ಅಳವಡಿಸಿಕೊಳ್ಳಿ
ಸಮಾಜದ ಮುಖಂಡ ರಾಜಪ್ಪ ಮಾತನಾಡಿ, ಸಮಾಜ ಸಂಘಟನೆ ಜತೆಗೆ ಶಿಕ್ಷಣದ ಬೆಳವಣಿಗೆಗೆ ಶ್ರಮಿಸಲಾಗುತ್ತಿದ್ದು, ನುಲಿಯ ಚಂದಯ್ಯ ವಚನದಂತೆ ಜೀವನ ರೂಪಿಸಿಕೊಳ್ಳಲಾಗುತ್ತಿದೆ ಎಂದರು. ಪ್ರಮುಖರಾದ ರಾಮಚಂದ್ರಪ್ಪ, ನಾಗರಾಜ್, ಗಾಳೆಪ್ಪ, ನಾಗರಾಜವೆಂಕೋಬ, ಶ್ರೀಕಾಂತ ಇತರರಿದ್ದರು.