

ಚಿಕ್ಕಮಗಳೂರು: ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯರಾಗಿ ಆಯ್ಕೆಗೊಂಡ ಹಿರೇಮಗಳೂರು ಗ್ರಾಮದ ಆಶಾ ಸುರೇಶ್ ಅವರಿಗೆ ಹಿರೇಮಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯಿAದ ಗುರುವಾರ ಗೌರವಿಸಿ ಅಭಿನಂದನೆ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಎಚ್.ಕೆ.ಕೇಶವಮೂರ್ತಿ, ಗ್ರಾಮದ ಮಹಿಳೆಯರನ್ನು ಗುರುತಿಸಿ ಸಿಡಿಎ ಸದಸ್ಯರನ್ನಾಗಿಸಿರುವುದು ಹೆಮ್ಮೆಯ ಸಂಗತಿ. ಅದರಂತೆ ಮುಂಬರುವ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸುವಂತಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸತೀಶ್, ನಿರ್ದೇಶಕರಾದ ಯೋಗೀಶ್, ಜಗದೀಶ್, ಗಂಗಾಧರ್, ಜಯಲಕ್ಷ್ಮೀ, ಮಾಲುಂಡಪ್ಪ, ಲೋಕೇಶ್ ಮತ್ತಿತರರಿದ್ದರು.