ಸಿ.ಬಿ.ಜನಾರ್ದನ, ಎಚ್.ಎ.ವಚನ್‌ಗೆ ಸನ್ಮಾನ

18SPT3
ಸೋಮವಾರಪೇಟೆ ಡಾಲ್ಫಿನ್ಸ್ ಕ್ಲಬ್ ವತಿಯಿಂದ ರಾಷ್ಟ್ರೀಯ ಜೂನಿಯರ್ ಹಾಕಿ ತಂಡದ ಹಿರಿಯ ತರಬೇತುದಾರರಾಗಿ ನೇಮಕಗೊಂಡಿರುವ ಸಿ.ಬಿ. ಜನಾರ್ದನ ಹಾಗೂ ಜೂನಿಯರ್ ಹಾಕಿ ತಂಡಕ್ಕೆ ಆಯ್ಕೆಯಾಗಿರುವ ಎಚ್.ಎ. ವಚನ್ ಅವರನ್ನು ಸನ್ಮಾನಿಸಲಾಯಿತು. ಅಶೋಕ್, ಪ್ರಕಾಶ್, ಈರಪ್ಪ, ರಾಯ್ ಇದ್ದರು.
Published on

ಸೋಮವಾರಪೇಟೆ: ಡಾಲ್ಫಿನ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ರಾಷ್ಟ್ರೀಯ ಜೂನಿಯರ್ ಹಾಕಿ ತಂಡದ ಹಿರಿಯ ತರಬೇತುದಾರರಾಗಿ ನೇಮಕಗೊಂಡಿರುವ ಸಿ.ಬಿ.ಜನಾರ್ದನ ಹಾಗೂ ಜೂನಿಯರ್ ಹಾಕಿ ತಂಡಕ್ಕೆ ಆಯ್ಕೆಯಾಗಿರುವ ಎಚ್.ಎ.ವಚನ್ ಅವರನ್ನು ಸೋಮವಾರ ಸನ್ಮಾನಿಸಲಾಯಿತು.


ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಬ್ಲೂಸ್ಟಾರ್ ಹಾಕಿ ಸಂಸ್ಥೆಯ ಸ್ಥಾಪಕ ಸದಸ್ಯ ಬಿ.ಎಂ. ಸುರೇಶ್ ಸನ್ಮಾನಿಸಿ ಮಾತನಾಡಿ, ಇಂದು ಕ್ರೀಡಾ ಕ್ಷೇತ್ರದತ್ತ ಯುವಕರ ಆಸಕ್ತಿ ಕಡಿಮೆಯಾಗುತ್ತಿದೆ. ರಾಷ್ಟ್ರೀಯ ಹಾಕಿ ತಂಡದಲ್ಲಿ ಜಿಲ್ಲೆಯ ಹಾಕಿಪಟುಗಳ ಸಂಖ್ಯೆ ಕ್ಷೀಣಿಸುತ್ತಿದೆ. ಅವರನ್ನು ಕ್ರೀಡೆಯತ್ತ ಸೆಳೆಯುವ ಕೆಲಸವಾಗಬೇಕು. ಕ್ರೀಡಾಪಟುಗಳಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿ, ಅವರಿಗೆ ಮಾರ್ಗದರ್ಶನ ನೀಡುವುದರೊಂದಿಗೆ, ಭವಿಷ್ಯದ ಜೀವನಕ್ಕಾಗಿ ನೌಕರಿಯಲ್ಲಿ ಹೆಚ್ಚಿನ ಅವಕಾಶ ಸಿಗುವಂತಾಗಬೇಕು ಎಂದು ಹೇಳಿದರು.

ಡಾಲ್ಫಿನ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಅಶೋಕ್, ಕಾರ್ಯದರ್ಶಿ ಕೆ.ಎಸ್.ಪ್ರಕಾಶ್, ನಿವೃತ್ತ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ, ಹಿರಿಯ ಹಾಕಿ ಆಟಗಾರ ಕೆ.ಪಿ.ರಾಯ್, ಬ್ಲೂಸ್ಟಾರ್ ಹಾಕಿ ಸಂಸ್ಥೆಯ ಹಿರಿಯ ಆಟಗಾರ ಟಿ.ಎಸ್.ಶಶಿಧರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net