

ಆರ್ಡಿ: ಇಲ್ಲಿನ ಚಿತ್ತೇರಿ ಶ್ರೀದುರ್ಗಾಪರಮೇಶ್ವರಿ ಸಿದ್ದಿವಿನಾಯಕ ದೇವಸ್ಥಾನದ ಸಮೀಪದ ಸಭಾಭವನದಲ್ಲಿ ನಡೆಯುತ್ತಿರುವ ಮದ್ಯವರ್ಜನಾ ಶಿಬಿರದಲ್ಲಿ ಉದ್ಯಮಿ ಕಿರಣ್‌ಕುಮಾರ್ ಶೆಟ್ಟಿ ಚಾರ ಅವರನ್ನು ಸನ್ಮಾನಿಸಲಾಯಿತು. ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಆರ್ಡಿ, ಬೆಳ್ವೆ ವಲಯ ಹಾಗೂ ವಿವಿಧ ಸಂಘ-ಸಂಸ್ಥೆಗಳು ಆಶ್ರಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಶಿಬಿರದ ವ್ಯವಸ್ಥಾಪನಾ ಸಮಿತಿ ಆರ್ಡಿ ಅಧ್ಯಕ್ಷ ಸುರೇಶ ಶೆಟ್ಟಿ, ಪತ್ರಕರ್ತ ಕೆ.ಸಂಜೀವ ಆರ್ಡಿ, ಪ್ರಮುಖರಾದ ಲೀಲಾವತಿ, ಕೃಷ್ಣ ಪುತ್ರನ್, ಗಣೇಶ್ ಆಚಾರ್ಯ, ವಾದಿರಾಜ ಶೆಟ್ಟಿ ಚಾರ, ವಿಠಲ ಶೆಟ್ಟಿ ಸೀತಾನದಿ, ಎಚ್.ವಸಂತಕುಮಾರ್ ಶೆಟ್ಟಿ, ಸುದರ್ಶನ ಶೆಟ್ಟಿ ,ವಿದ್ಯಾಧರ, ಜಯಲಕ್ಷ್ಮೀ, ರಾಘವೇಂದ್ರ ಗೌಡ ಮತ್ತಿತರರು ಉಪಸ್ಥಿತರಿದ್ದರು.