

ರಾಯಚೂರು: ಲೋಕಸಭೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸ್ಥಳೀಯ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ಭಗೀರಥ ಮಹರ್ಷಿ ಜಯಂತಿಯನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು.
ಗ್ರೇಡ್-2 ತಹಸೀಲ್ದಾರ್ ಸೈಯದ್ ಮೀರ್ ಅನ್ವರ್ ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಉಪ್ಪಾರ ಸಮಾಜದ ಮುಖಂಡರಾದ ಪಾಗುಂಟಪ್ಪ ಮಿರ್ಜಾಪುರ, ಯು.ವೆಂಕೋಬ, ಚಂದ್ರಶೇಖರ, ಪಿ.ಸುರೇಖಾ, ಜೂಕೂರು ಶ್ರೀನಿವಾಸ, ಮಾಲತಿ, ಕವಿತಾ, ಶ್ರೀನಿವಾಸ ಗಟ್ಟು, ನರಸರೆಡ್ಡಿ ಗಧಾರ್, ಎಂ.ವೆಂಕಟೇಶ, ಶ್ರೀನಿವಾಸ ಹಾಲ್ವಿ, ಗಿರಿಸಾಗರ್, ಪ್ರವೀಣಕುಮಾರ ಉಪಸ್ಥಿತರಿದ್ದರು.