

ಕುಂದಾಪುರ: ಜೆಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ಕುಂದಾಪುರದಲ್ಲಿ ನಡೆಯುತ್ತಿರುವ ಜೇಸಿ ಸಪ್ತಾಹದ ಸಭಾ ಕಾರ್ಯಕ್ರಮದಲ್ಲಿ ಚೋನಮನೆ ಶನೀಶ್ವರ ದೇವಸ್ಥಾನದ ಧರ್ಮದರ್ಶಿ ಅಶೋಕ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಜೆಸಿಐ ಕುಂದಾಪುರ ಸಿಟಿ ಅಧ್ಯಕ್ಷ ರಾಘವೇಂದ್ರ ಕುಲಾಲ್ ಹೆಮ್ಮಾಡಿ ಅಧ್ಯಕ್ಷತೆ ವಹಿಸಿದ್ದರು. ಕಟ್ಬೇಲ್ತೂರು ಗಾಪಂ ಉಪಾಧ್ಯಕ್ಷ ರಾಮ ಶೆಟ್ಟಿ, ಜೆಸಿಐ ಕುಂದಾಪುರ ಪೂರ್ವ ಅಧ್ಯಕ್ಷರಾದ ಗೋಪಾಲ ಪೂಜಾರಿ ಕೊಮೆ, ಚಂದ್ರಕಾಂತ್, ಜನತಾ ಪ್ರೌಢ ಶಾಲೆ ಮುಖ್ಯಶಿಕ್ಷಕ ಮಂಜು ಕಾಳಾವರ, ಜೆಸಿಐ ಕುಂದಾಪುರ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ನಿಕಟಪೂರ್ವ ಅಧ್ಯಕ್ಷೆ ಸೋನಿ ಡಿಕೋಸ್ಟ, ಸಪ್ತಾಹ ಸಭಾಪತಿ ರಾಜು ಮೂಡ್ಲಕಟ್ಟೆ, ಕಾರ್ಯದರ್ಶಿ ವಿಜಯ ಭಂಡಾರಿ, ಸಂಚಾಲಕ ನಾಗೇಶ್ ನಾವಡ, ಖಜಾಂಚಿ ಶಶಾಂಕ್ ಪೂಜಾರಿ, ಜೇಸಿರೇಟ್ ಚೇರ್ಪರ್ಸನ್ ರೇಷ್ಮಾ ಕೋಟ್ಯಾನ್, ಯುವ ಜೇಸಿ ಚೇರ್ಪರ್ಸನ್ ಕಿರಣ್, ಕಾರ್ಯಕ್ರಮ ಸಂಯೋಜಕ ಸರೊಜಾ ಎಂ., ಸುಧೀರ್ ನಾಯ್ಕ, ಪ್ರೇಮಾ ಡಿಕೂನ್ಹ, ಅಕ್ಷಯ ಆಚಾರ್ ಹೆಮ್ಮಾಡಿ, ರಾಘವೇಂದ್ರ ಶೇಟ್, ಅಂಕಿತಾ, ಗೌತಮಿ, ಸುಮೇದಾ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು.