ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

27M.D.R.4
ಮದ್ದೂರಿನಲ್ಲಿ ಆಯೋಜಿಸಿದ್ದ 76ನೇ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಅಭಿನಂದಿಸಲಾಯಿತು. ಕೋಕಿಲಾ ಅರುಣ್, ಎಂ.ಸಿ.ಬಸವರಾಜು, ಕೆ.ಟಿ.ಶಿವಕುಮಾರ್, ಎಲ್.ಸಂದೇಶ್, ಡಿ.ಸಿ.ಮಹೇಂದ್ರ, ಕೃಷ್ಣ, ನಿಂಗಪ್ಪ ಇತರರು ಇದ್ದರು.
Published on

ಮದ್ದೂರು: ಭಾರತದ ಸಂವಿಧಾನ ರಕ್ಷಣಾ ಸಮಿತಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆಯಿಂದ ಭಾನುವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ 76ನೇ ಸಂವಿಧಾನ ದಿನಾಚರಣೆ ಆಯೋಜಿಸಲಾಗಿತ್ತು.

ಸಮೂಹ ಸಂಪನ್ಮೂಲ ವ್ಯಕ್ತಿ ಟಿ.ಎನ್.ಚಿಕ್ಕವೀರಯ್ಯ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಜಗತ್ತಿನಲ್ಲಿ ಅತಿ ಹೆಚ್ಚು ಓದಿದ ವ್ಯಕ್ತಿ ಹಾಗೂ ಅತಿ ಹೆಚ್ಚು ಪದವಿ ಪಡೆದ ವ್ಯಕ್ತಿಯಾಗಿದ್ದು ಅವರು ರಚಿಸಿದ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದೆ ಎಂದು ಬಣ್ಣಿಸಿದರು.

ಪುರಸಭಾಧ್ಯಕ್ಷೆ ಕೋಕಿಲಾ ಅರುಣ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗಣ್ಯರಿಗೆ ಅಭಿನಂದನೆ: ಸೋ.ಸಿ.ಪ್ರಕಾಶ್, (ಹೋರಾಟ), ಎಂ. ಆರ್.ಶಿವಾನಂದಯ್ಯ (ಉತ್ತಮವಾದ ಸೇವೆ), ಸಿದ್ದರಾಜು (ರಾಜಕೀಯ), ಜಯರಾಮ (ಸಮಾಜ ಸೇವೆ), ಕೆ.ಬಿ.ಪ್ರೇಮ್‌ಕುಮಾರ್ (ಸಾಮಾಜಿಕ ಕಳಕಳಿ), ಹುರಗಾಲವಾಡಿ ರಾಮಯ್ಯ (ರಂಗ ಕಲೆ), ಬೆಸಗರಹಳ್ಳಿ ಚಂದ್ರು (ಸಾಹಿತ್ಯ ಮತ್ತು ಶಿಕ್ಷಣ) ದಾಕ್ಷಾಯಿಣಿ ವೆಂಕಟೇಶ್ (ಸಂಘಟನೆ) ಅವರನ್ನು ಸನ್ಮಾನಿಸಲಾಯಿತು.

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಗೌರವಾಧ್ಯಕ್ಷ ಎಂ.ಸಿ.ಬಸವರಾಜು, ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಕುಂಬಾರ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಕೃಷ್ಣ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದರಾಜು, ಸುಮುಖ ನಿಧಿ ಲಿಮಿಟೆಡ್ ಅಧ್ಯಕ್ಷ ಕೆ.ಆರ್.ಕುಮಾರ್, ಪರಿಶಿಷ್ಟಜಾತಿ/ಪಂಗಡದ ನೌಕರರ ಸಂಘದ ಅಧ್ಯಕ್ಷ ಶಿವಣ್ಣ,

ಪ್ರಧಾನ ಕಾರ್ಯದರ್ಶಿ ಕೆ.ಟಿ, ಶಿವಕುಮಾರ್, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಡಿ.ಸಿ.ಮಹೇಂದ್ರ, ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಅಧ್ಯಕ್ಷ ಕೃಷ್ಣ, ಅಹಿಂದ ಸಂರಕ್ಷಣಾ ವೇದಿಕೆ ಅಧ್ಯಕ್ಷ ಆತಗೂರು ನಿಂಗಪ್ಪ, ಗ್ರಾಪಂ ಅಧ್ಯಕ್ಷರಾದ, ಸಿದ್ದರಾಜು, ಈಶ್ವರ್, ಕದಸಂಸ ಜಿಲ್ಲಾ ಸಂಚಾಲಕ ರಾಮನಂದ, ಕೃಷಿ ಕೂಲಿಕಾರರ ಸಂಘದ ಹನುಮೇಶ್, ಮುಖಂಡರಾದ ಪಿ.ಶಶಿಕುಮಾರ್, ರಾಚಯ್ಯ, ಶ್ರೀನಿವಾಸ್, ಕರಡಕೆರೆ ಯೋಗೇಶ್, ಚಂದ್ರು, ಸುರೇಶ್, ರಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net