250 ಸಾಧಕರಿಗೆ ಸನ್ಮಾನ, ಕ್ಲಾಸಿಕ್ ಸಂಭ್ರಮ ನಾಳೆ

9 Dwd 1 Laxman Uppar
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಕ್ಲಾಸಿಕ್ ಕೆಎಎಸ್ ಆ್ಯಂಡ್ ಐಎಎಸ್ ಸ್ಟಡಿ ಸರ್ಕಲ್ ಸಂಸ್ಥೆಯಲ್ಲಿ ತರಬೇತಿ ಪಡೆದು, ಸ್ಪರ್ಧಾ ಸೂರ್ತಿ ಮಾಸಪತ್ರಿಕೆ ಓದಿ 200ಕ್ಕೂ ಹೆಚ್ಚು ಕಾನ್ಸ್ಟೇಬಲ್‌ಗಳಾಗಿದ್ದಾರೆ. 545 ಹುದ್ದೆಗಳ ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ 50ಕ್ಕೂ ಹೆಚ್ಚು ಜನ ಉತ್ತೀರ್ಣರಾಗಿದ್ದಾರೆ. ಈ ಸಾಧಕರನ್ನು ಜ. 11ರಂದು ಬೆಳಗ್ಗೆ 10.30ಕ್ಕೆ `ಕ್ಲಾಸಿಕ್ ಸಂಭ್ರಮ- 2025' ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದು ಕ್ಲಾಸಿಕ್ ಸಂಸ್ಥೆಯ ನಿರ್ದೇಶಕ ಲಕ್ಷ÷್ಮಣ ಎಸ್. ಉಪ್ಪಾರ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ತಪೋವನದ ಬಳಿಯ ಕ್ಲಾಸಿಕ್ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಹುಬ್ಬಳ್ಳಿ ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮೀಜಿ ಮತ್ತು ಅಥಣಿ ಗಚ್ಚಿನ ಮಠದ ಶ್ರೀ ಶಿವಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹಿರಿಯ ನಿವೃತ್ತ ಡಿಜಿಪಿ ಶಂಕರ ಬಿದರಿ ಕಾರ್ಯಕ್ರಮ ಉದ್ಘಾಟಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಹು-ಧಾ ಪಶ್ಚಿಮ ಶಾಸಕ ಅರವಿಂದ ಬೆಲ್ಲದ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಗೋಪಾಲ ಬ್ಯಾಕೋಡ, ಮಂಗಳೂರು ನಗರ ಎಸಿಪಿ ಗೀತಾ ಕುಲಕರ್ಣಿ ಅತಿಥಿಗಳಾಗಿ ಭಾಗವಹಿಸುವರು. ನಾನು ಅಧ್ಯಕ್ಷತೆ ವಹಿಸುತ್ತೇನೆ ಎಂದರು.

ಸAಸ್ಥೆಯ ಸಂಪನ್ಮೂಲ ವ್ಯಕ್ತಿ ಡಾ. ಎಂ.ವೈ. ಸಾವಂತ ಮಾತನಾಡಿ, 1997ರಲ್ಲಿ ಆರಂಭವಾದ ಕ್ಲಾಸಿಕ್ ಸಂಸ್ಥೆಯು 27ನೇ ವರ್ಷಕ್ಕೆ ಕಾಲಿರಿಸಿದೆ. ಈವರೆಗೆ ನಿರಂತರವಾಗಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಯುವಕರಿಗೆ ತರಬೇತಿ ನೀಡುತ್ತ ಬಂದಿದೆ. ಈ ಸಂಸ್ಥೆಯಿAದ ತರಬೇತಿ ಪಡೆದ ಸಾವಿರಾರು ಯುವಕರು ವಿವಿಧ ಇಲಾಖೆಗಳಲ್ಲಿ ನೇಮಕಗೊಂಡು ಜೀವನ ರೂಪಿಸಿಕೊಂಡಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net