

ಗುಂಡ್ಲುಪೇಟೆ : ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ವತಿಯಿಂದ ಸಂಘದ ತಾಲೂಕು ಅಧ್ಯಕ್ಷರಾಗಿದ್ದ ಇತ್ತೀಚೆಗೆ ನಿಧನರಾದ ಎಚ್. ಪಿ.ಮಹೇಂದ್ರ ಅವರಿಗೆ ಸೆ.23ರ ಬೆಳಗ್ಗೆ 10 ಗಂಟೆಗೆ ಲ್ಯಾಂಪ್ ಸೊಸೈಟಿ ಆವರಣದಲ್ಲಿರುವ ಸಂಘದ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿದೆ.
ತಾಲೂಕು ಹಾಗೂ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳ ನೌಕರರು ತಪ್ಪದೆ ಭಾಗವಹಿಸಬೇಕೆಂದು ಸಂಘದ ಚಾಮರಾಜನಗರ ಜಿಲ್ಲಾಧ್ಯಕ್ಷ ಬರಗಿ ಸಿದ್ದರಾಜು, ಜಿಲ್ಲಾ ಉಪಾಧ್ಯಕ್ಷ ಚಿಕ್ಕತುಪ್ಪೂರು ಮಲ್ಲು ಪ್ರಕಟಣೆಯಲ್ಲಿ ಕೋರಿದ್ದಾರೆ.