ಮಾರ್ಚ್ 28 ರಂದು ಮಾಜಿ ಶಾಸಕ ವಾಸು ಅವರ ಶ್ರದ್ಧಾಂಜಲಿ ಸಭೆ

Vasu
Published on

ಮೈಸೂರು: ಮಾಜಿ ಶಾಸಕ ವಾಸು ಅವರ ಶ್ರದ್ಧಾಂಜಲಿ ಸಭೆಯನ್ನು ಮಾರ್ಚ್ 28 ರಂದು ಸಂಜೆ 4 ಗಂಟೆಗೆ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಸಾಹುಕಾರ್ ಚನ್ನಯ್ಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಸುತ್ತೂರು ಶ್ರೀ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಶ್ರೀ ಮಠದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ರಾಮಕೃಷ್ಣ ವಿದ್ಯಾಶಾಲೆಯ ಕರೆಸ್ಪಾಂಡೆಂಟ್ ಶ್ರೀ ಯುಕ್ತೇಶಾನಂದ ಜೀ, ಬಿಷಪ್ ಥಾಮ್ ಆ್ಯಂಟನಿ ವಾಳಪಿಳ್ಳಿ ಸಾನಿಧ್ಯದಲ್ಲಿ ನಾಡಿನ ಹಿರಿಯ ರಾಜಕಾರಣಿಗಳು, ಸಾಹಿತಿಗಳು, ಕಲಾವಿದರು, ಶಿಕ್ಷಣ ತಜ್ಞರು, ವಿಜ್ಞಾನಿಗಳು, ವೈದ್ಯರು, ಭಾಗವಹಿಸಿ ವಾಸು ಅವರಿಗೆ ನುಡಿ ನಮನ ಸಲ್ಲಿಸಲಿದ್ದಾರೆ ಎಂದು ಪ್ರಟಕಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net