ಮದ್ದೂರು: ಅಪಘಾತದಲ್ಲಿ ನಿಧನರಾದ ಕೆಆರ್‌ಎಸ್ ಪಕ್ಷದ ಉಪಾಧ್ಯಕ್ಷರಾದ ಲಿಂಗೇಗೌಡ ಅವರಿಗೆ ಶ್ರದ್ಧಾಂಜಲಿ ಸಭೆಯು ಡಿ.19 ರಂಸು ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಭ್ರಷ್ಟಾಚಾರದ ವಿರುದ್ಧ ದನಿ ಎತ್ತುವ ಮೂಲಕ ಉತ್ತಮ ಹೋರಾಟಗಳನ್ನು ನಡೆಸುತ್ತಿದ್ದ ಲಿಂಗೇಗೌಡರಿಗೆ ಗೌರವ ನುಡಿ-ನಮನವನ್ನು ಸಲ್ಲಿಸುವ ಸಲುವಾಗಿ ಈ ಶ್ರದ್ಧಾಂಜಲಿ ಸಭೆಯನ್ನು ಕರೆಯಲಾಗಿದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರಾದ ನ.ಲಿ. ಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಟ್ಟಣದ ಸಂಜಯ ಚಿತ್ರಮಂದಿರದ ಮುಂದೆ ಅಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಸಭೆಯಲ್ಲಿ ಸಾಮಾಜಿಕ ಚಿಂತಕರಾದ ವಿವೇಕಾನಂದ, ಸಾಹಿತಿಗಳಾದ ತಿರುಮಲಪುರ ನಾರಾಯಣ್, ಕೆಆರ್‌ಎಸ್ ಪಕ್ಷದ ಸೋಮಸುಂದರ್, ಜ್ಯೋತಿ, ನಾಗಣ್ಣ ಬಾಣಸವಾಡಿ ಸೇರಿದಂತೆ ಹಲವರು ಭಾಗವಹಿಸಲಿದ್ದು, ತಾಲೂಕಿನ ಹಲವಾರು ಪ್ರಗತಿಪರ ಸಂಘಟನೆಗಳ ಮುಖಂಡರು, ರೈತ ಪರ ಹೋರಾಟಗಾರರು ಸೇರಿದಂತೆ ಸಾರ್ವಜನಿಕರು ಪಾಲ್ಗೊಳ್ಳುವಂತೆ ನ.ಲಿ.ಕೃಷ್ಣ ಮನವಿ ಮಾಡಿದ್ದಾರೆ.