ಅಧ್ಯಾಪಕ ಪರಿಷತ್‌ನಿಂದ ಗೌರವಾರ್ಪಣೆ

New Project (3)
Published on

ಮಂಜೇಶ್ವರ: ದೇಶೀಯ ಅಧ್ಯಾಪಕ ಪರಿಷತ್ ಮಂಜೇಶ್ವರ ಉಪಜಿಲ್ಲಾ ಸಮಿತಿ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಮಂಗಲ್ಪಾಡಿ ಜಿ.ಎಚ್.ಎಸ್.ಎಸ್. ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಶಂಕರನಾರಾಯಣ ಭಟ್ ಸಾದಂಗಾಯ ಅವರನ್ನು ಸ್ವಗೃಹದಲ್ಲಿ ಗೌರವಿಸಲಾಯಿತು.

ಎನ್.ಟಿ.ಯು. ಮಂಜೇಶ್ವರ ಉಪಜಿಲ್ಲಾ ಸಮಿತಿ ಸದಸ್ಯ ಗಣೇಶ್ ಕುಮಾರ್ ಸನ್ಮಾನಿತರ ಬಗ್ಗೆ ಮಾತನಾಡಿದರು. ಆನೆಕಲ್ಲು ಎ.ಯು.ಪಿ.ಎಸ್. ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಸತ್ಯನಾರಾಯಣ ಭಟ್, ಎನ್.ಟಿ.ಯು. ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಹಾಗೂ ಸನ್ಮಾನಿತರ ಪತ್ನಿ ನಿರ್ಮಲಾ ಶುಭಹಾರೈಸಿದರು. ಮಂಜೇಶ್ವರ ಉಪಜಿಲ್ಲಾ ಸದಸ್ಯರಾದ ನಿವೇದಿತಾ, ತುಳಸಿ ಹಾಗೂ ರಾಧಾ ಮಾಧವ ಮೊದಲಾದವರಿದ್ದರು. ಜಿಲ್ಲಾ ಜತೆ ಕಾರ್ಯದರ್ಶಿ ಈಶ್ವರ್ ಕಿದೂರು ಸ್ವಾಗತಿಸಿದರು. ಉಪಜಿಲ್ಲಾ ಕೋಶಾಧಿಕಾರಿ ರುವೀರ್ ರಾವ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net