ಯೋಧ ಹಜರೇಸಾಬಗೆ ಸನ್ಮಾನ, ಬೀಳ್ಕೊಡುಗೆ

Tribute and farewell to soldier Hazaresab
Published on

ಕುಂದಗೋಳ: ತಾಲೂಕಿನ ಹಿರೇಹರಕುಣಿ ಗ್ರಾಮದಲ್ಲಿ ಕರ್ತವ್ಯಕ್ಕೆ ತೆರಳಿದ ಯೋಧ ಹಜರೇಸಾಬ ನದಾಫ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ಹಿರೇಹರಕುಣಿ ಗ್ರಾಪಂ ಸದಸ್ಯ ಕೆಂಚಪ್ಪ ಸಾದರ ಮಾತನಾಡಿ, ನಮ್ಮ ಸೈನಿಕರು ದೇಶದ ರಕ್ಷಣೆಗಾಗಿ ಹೋರಾಟ ಮಾಡಲು ಸದಾ ಸಿದ್ಧರಿರುತ್ತಾರೆ. ಕುಟುಂಬ ಬಿಟ್ಟು ದೇಶ ರಕ್ಷಣೆ ಮಾಡುತ್ತಾರೆ ಎಂದು ಹೇಳಿದರು.

ಹಿರೇಹರಕುಣಿ ಗ್ರಾಮದ ಹಜರೇಸಾಬ ನದಾಫ್ ಗುಜರಾತ ರಾಜ್ಯದಲ್ಲಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದು, ರಜೆಯ ಮೇಲೆ ಗ್ರಾಮಕ್ಕೆ ಬಂದಿದ್ದರು. ಭಾರತ ಸರ್ಕಾರದ ಯುದ್ಧದ ತುರ್ತುಕರೆ ಬಂದ ಹಿನ್ನೆಲೆಯಲ್ಲಿ ರಜೆ ಮೊಟಕುಗೊಳಿಸಿ, ಮತ್ತೆ ದೇಶ ಸೇವೆಗೆ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಿ, ಯುದ್ಧದಲ್ಲಿ ಗೆದ್ದು ಬರಲಿ ಎಂದು ಹಾರೈಸಿ ಬೀಳ್ಕೊಡುತ್ತಿದ್ದೇವೆ ಎಂದರು.

ಗ್ರಾಮದ ಹಿರಿಯರಾದ ರುದ್ರಪ್ಪ ಮಡ್ಲಿ, ಅಶೋಕ ಹಸಬಿ, ಮುದಕಣ್ಣ ಸಾದರ, ಮಂಜುನಾಥ ವೈ.ಸಿ., ಬಸವರಾಜ ಚಿಕ್ಕಹರಕುಣಿ, ಮುದಕಣ್ಣ ತರ್ಲಘಟ್ಟ, ಜಗದೀಶ ಕಳ್ಳಿಮನಿ, ನಿಂಗಪ್ಪ ಕೊಪ್ಪದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net