ಬುಡಕಟ್ಟು ಜನರ ವಿಶೇಷ ಗ್ರಾಮಸಭೆ

17 MDL 01
ಮುದಗಲ್ ಸಮೀಪದ ತಲೇಖಾನ್ ಗ್ರಾಪಂನಲ್ಲಿ ಆಯೋಜಿಸಿದ್ದ ಬುಡಕಟ್ಟು ಜನರ ವಿಶೇಷ ಗ್ರಾಮಸಭೆ ಅಂಗವಾಗಿ ಗ್ರಾಪಂ ಅಧ್ಯಕ್ಷೆ ಉಮ್ಮವ್ವ ಸಸಿ ನೆಟ್ಟರು. ಸದಸ್ಯರಾದ ಹನುಮನಗೌಡ ಬಗ್ಗಲಗುಡ್ಡ, ಕಾರ್ಯದರ್ಶಿ ಥಾಮಸ್, ಬಿಲ್‌ಕಲೆಕ್ಟರ್ ಬಸವರಾಜ ಇತರರಿದ್ದರು.
Published on

ಮುದಗಲ್: ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರ 150ನೇ ವರ್ಷದ ಜನ್ಮದಿನ ಅಂಗವಾಗಿ ಭಾನುವಾರ ಗ್ರಾಮಸಭೆ ನಡೆಯಿತು. ತಲೇಖಾನ ಗ್ರಾಪಂ ಅಧ್ಯಕ್ಷೆ ಉಮ್ಮವ್ವ ಗ್ಯಾನಪ್ಪ ಚಾಲನೆ ನೀಡಿದರು.

ಸಭೆಯಲ್ಲಿ ಬುಡಕಟ್ಟು ಜನರಿಗೆ ಸರ್ಕಾರದ ಸೌಲಭ್ಯ ಮತ್ತು ಯೋಜನೆಗಳ ಕುರಿತು ಮಾಹಿತಿ ನೀಡಲಾಯಿತು. ಈ ವೇಳೆ ಸಂವಿಧಾನದ ಪ್ರಸ್ತಾವನೆ, ಸ್ವಚ್ಛತೆ ಹಾಗೂ ಮಾದಕ ವಸ್ತುಗಳ ನಿಷೇಧ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಗ್ರಾಪಂ ಸಿಬ್ಬಂದಿ ಕನಕಪ್ಪ ಗುಡಿಹಾಳ, ಶರಣಬಸವರಾಜ, ನಾಗರತ್ನ ಇತರರಿದ್ದರು. 17 ಎಂಡಿಎಲ್ 01 ಮುದಗಲ್ ಸಮೀಪದ ತಲೇಖಾನ್ ಗ್ರಾಪಂನಲ್ಲಿ ಆಯೋಜಿಸಿದ್ದ ಬುಡಕಟ್ಟು ಜನರ ವಿಶೇಷ ಗ್ರಾಮಸಭೆ ಅಂಗವಾಗಿ ಗ್ರಾಪಂ ಅಧ್ಯಕ್ಷೆ ಉಮ್ಮವ್ವ ಸಸಿ ನೆಟ್ಟರು. ಸದಸ್ಯರಾದ ಹನುಮನಗೌಡ ಬಗ್ಗಲಗುಡ್ಡ, ಕಾರ್ಯದರ್ಶಿ ಥಾಮಸ್, ಬಿಲ್‌ಕಲೆಕ್ಟರ್ ಬಸವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net