ಕಾಡುಗೊಲ್ಲರ ಸಮಗ್ರ ಅಭಿವೃದ್ಧಿಗೆ ಪ್ರಯತ್ನ

dj hyr kadugolla
Published on

ಹಿರಿಯೂರು: ಬುಡಕಟ್ಟು ಸಂಸ್ಕೃತಿಯ ಭವ್ಯ ಪರಂಪರೆ ಹೊಂದಿರುವ ಕಾಡುಗೊಲ್ಲ ಸಮುದಾಯದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್ ಭರವಸೆ ನೀಡಿದರು.

ತಾಲೂಕು ಕಾಡುಗೊಲ್ಲ ಸಂಘಟನಾ ಸಮಿತಿ ನಗರದ ತುಳಸಿ ನಾರಾಯಣರಾವ್ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನಿತರಾಗಿ ಮಾತನಾಡಿದರು.

ಕಾಡುಗೊಲ್ಲ ಸಮುದಾಯ ಹಿರಿಯೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದೆ. ಚಳ್ಳಕೆರೆ ಕ್ಷೇತ್ರದಲ್ಲಿ ನನ್ನ ರಾಜಕೀಯ ಜೀವನ ಆರಂಭಕ್ಕೆ ಈ ಸಮುದಾಯ ಹೆಚ್ಚು ಶಕ್ತಿ ನೀಡಿತ್ತು ಎಂದು ಸ್ಮರಿಸಿದರು.

ನಂಬಿಕೆ, ಪ್ರೀತಿ, ವಿಶ್ವಾಸಕ್ಕೆ ಹೆಸರಾದ ಕಾಡುಗೊಲ್ಲ ಸಮುದಾಯದ ಹಿತ ಕಾಯಲು ಬದ್ಧನಾಗಿದ್ದೇನೆ. ಸಮುದಾಯದ ಮಕ್ಕಳ ಭವಿಷ್ಯಕ್ಕೆ ನೆರವಾಗಲು ಅಲೆಮಾರಿ ವಸತಿ ಶಾಲೆ ಸ್ಥಾಪಿಸಲು ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ಸಮುದಾಯದ ಮುಖಂಡ ಪಿ.ಆರ್.ದಾಸ್ ಮಾತನಾಡಿ, ಸಚಿವರು ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಎಸ್ಟಿ ಮೀಸಲು ಸೌಲಭ್ಯ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಎಸ್ಟಿ ಮೀಸಲು ಭರವಸೆ: ಬಿಜೆಪಿ ಎಂದೂ ಮೀಸಲಾತಿ ಒಪ್ಪುವುದಿಲ್ಲ. ಕಾಡುಗೊಲ್ಲರ ಬಹುದಿನದ ಬೇಡಿಕೆ ಎಸ್ಟಿ ಮೀಸಲು ಸೌಲಭ್ಯ ಕಲ್ಪಿಸಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಆದ್ಯತೆ ಮೇರೆಗೆ ಗೊಲ್ಲರಹಟ್ಟಿಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಅನುದಾನ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಜಿಪಂ ಮಾಜಿ ಅಧ್ಯಕ್ಷೆ ಗೀತಾ ನಂದಿನಿ ಗೌಡ, ನಗರಸಭೆ ಸದಸ್ಯರಾದ ಚಿತ್ರಜಿತ್, ಶಿವರಂಜನಿ, ವಕೀಲ ಯತೀಶ್, ಎಸ್.ಆರ್.ತಿಪ್ಪೇಸ್ವಾಮಿ,

ಪಿ.ಡಿ. ಕೋಟೆ ಗ್ರಾಪಂ ಅಧ್ಯಕ್ಷ ಪುಟ್ಟಸ್ವಾಮಿ ಗೌಡ, ಷಡಕ್ಷರಿ, ಡಿ.ರಂಗಯ್ಯ, ಕಲಾವಿದ ಮೋಹನ್, ಕೇಶವ, ಪ್ರಾಚಾರ್ಯ ಆರ್.ಮಹೇಶ್,

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಹೇಮಂತ್, ಚಿದಾನಂದ್, ದಿಂಡಾವರ ಮಹೇಶ್, ಚಿತ್ತಣ್ಣ, ಮಂಜುನಾಥ್, ಪ್ರಭು, ಕೃಷ್ಣಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net