

ವಿಜಯವಾಣಿ ಸುದ್ದಿ ಜಾಲ ಕಲಬುರಗಿ
ನಗರದ ಹೊರ ವಲಯದ ಪಟ್ಟಣ ಕ್ರಾಸ್ ಹತ್ತಿರದಲ್ಲಿಮಾರಾಕಾಸ್ತ್ರಗಳಿಂದ ಕೊಚ್ಚಿ ಮೂವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ತ್ರಿಬಲ್ ಮರ್ಡರ್ ಗೆ ಕಲಬುರಗಿ ಬೆಚ್ಚಿ ಬಿದ್ದಿದೆ.
ಸಿದ್ದಾರೂಢ (32) , ಜಗದೀಶ್ (25) , ರಾಮಚಂದ್ರ (35) ಭೀಕರವಾಗಿ ಕೊಲೆಯಾದವರು.
ಸಿದ್ದಾರೂಢ , ಜಗದೀಶ್ , ರಾಮಚಂದ್ರ , ಮೂರು ಜನ ಸಂಬಂಧಿಕರು.ಕಲಬುರಗಿ ನಗರದ ಹೊರವಲಯದಲ್ಲಿರುಚ ಪಟ್ಟಣ ಗ್ರಾಮದ ಬಳಿ ಧಾಬಾದಲ್ಲಿ ಕಳೆದ ತಡರಾತ್ರಿ ಕೆಲಸ ಮಾಡುತ್ತಿದ್ದಾಗ ಕಾರಿನಲ್ಲಿ ಬಂದ ಡ್ರೈವರ್ ಇತರರು ಧಾಬಾಗೆ ನುಗ್ಗಿ ದಾಳಿ ಮಾಡಿ ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಕೊಲೆ ಪರಾರಿಯಾಗಿದ್ದಾರೆ.
ಧಾಭಾದಲ್ಲಿ ಕೆಲಸ ಮಾಡುತಿದ್ದ ವೇಳೆ ಆಗಮಿಸಿದ ದುಷ್ಕರ್ಮಿಗಳು ದಾಳಿ ನಡೆಸಿದ್ದು ಕಂಡ ಅಲ್ಲಿದ್ದವರು ಜೀವಭಯದಿಂದ ಹೌಹಾರಿ ಓಡಿ ಹೋಗಿದ್ದಾರೆ.
ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆಮ ಕೊಲೆ ಮಾಡಿ ಎಸ್ಕೇಪ್ ಆದ ಹಂತಕರು ಪತ್ತೆಗೆ ಏಲ್ಲಡೆ ಶೋಧ ನಡೆದಿದೆ.
ಸ್ಥಳಕ್ಕೆ ಪೊಲೀಸ್ ಕಮೀಷನರ್ ಡಾ.ಶರಣಪ್ಪ ಎಸ್.ಡಿ, ಇನ್ ಸ್ಪೆಕ್ಟರ್ ಸಂತೋಷ ತಟ್ಟೆಪಳ್ಳಿ ಹಾಗೂ ಸಿಬ್ಬಂದಿ ದೌಡಾಯಿಸಿ, ಪರಿಶೀಲಿಸಿದರು
ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.