ಬಿಲ್ಲುಗಾರಿಕೆಯಲ್ಲಿ ಬುಡಕಟ್ಟು ಸಮಯದಾಯ ಸಾಧನೆ

18
Published on

ಮೈಸೂರು: ಕೇರಳ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಂಶೋಧನೆ, ತರಬೇತಿ ಮತ್ತು ಅಭಿವೃದ್ಧಿ ಅಧ್ಯಯನ ಸಂಸ್ಥೆ ಕೋಜಿಕೋಡ್‌ನಿಂದ ತಲಕ್ಕಾರ್ ಚಂದು ಸ್ಮರಣಾರ್ಥ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಮೈಸೂರಿನ ಬುಡಕಟ್ಟು ಸಮಯದಾಯದವರು ಬಹುಮಾನ ಪಡೆದಿದ್ದಾರೆ.

ಜನಜಾತೀಯ ಗೌರವವರ್ಷ ಆಚರಣೆ ಅಂಗವಾಗಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ವತಿಯಿಂದ ತೆರಳಿದ್ದ ಪಿರಿಯಾಪಟ್ಟಣ ತಾಲೂಕಿನ ಬುಡಕಟ್ಟು ಸಮುದಾಯದವರಾದ ಬಸಪ್ಪ, ಮೋಹನ್‌ಕುಮಾರ್, ಮಣಿ, ಜೆ.ಬಿ.ರಮೇಶ್ ಅವರು ಸ್ಪರ್ಧೆಯಲ್ಲಿ ಭಾಗವಹಿಸಿ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ. ವಿಜೇತರನ್ನು ಸಂಸ್ಥೆ ನಿರ್ದೇಶಕ ರಾಜ್‌ಕುಮಾರ್, ಉಪನಿರ್ದೇಶಕಿ ಪ್ರಭಾಅರಸ್, ಸಿಬ್ಬಂದಿ ಬಿ.ಆರ್. ಭವ್ಯ, ಗುಣಧರ್ ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net