

ಮಡಿಕೇರಿ: ಅರಣ್ಯ ಮೂಲ ಆದಿವಾಸಿಗಳಿಗೆ ರಾಜ್ಯ ಸರ್ಕಾರ ಶೇ.೪ ಪ್ರಮಾಣ ಒಳಮೀಸಲಾತಿ ನಿಗದಿಪಡಿಸುವುದರ ಮೂಲಕ ಸಂವಿಧಾನದ ಸಾಮಾಜಿಕ ನ್ಯಾಯ ಒದಗಿಸುವುದರ ಜತೆಗೆ ಅರಣ್ಯ ಹಕ್ಕು ಕಾಯ್ದೆ ೨೦೦೬ ರಲ್ಲಿನ ಹಕ್ಕುಗಳನ್ನು ಎತಾವತ್ತಾಗಿ ಜಾರಿಗೊಳಿಸಬೇಕು ಎಂದು ಬುಡಕಟ್ಟು ಕೃಷಿಕರ ಸಂಘದ ಕಾರ್ಯದರ್ಶಿ ಜೆ.ಎ.ಶಿವು ಒತ್ತಾಯಿಸಿದರು.
ಅನುಸೂಚಿತ ಬುಡಕಟ್ಟುವಿನ ೫೦ ಸಮುದಾಯಗಳನ್ನು ಎಸ್ಟಿ ಎಂದು ಘೋಷಿಸಿ ಶೇ.೩ರಷ್ಟು ಮಿಸಲಾತಿ ನೀಡಲಾಗುತ್ತಿದೆ. ೧೯೫೦ ರಲ್ಲಿ ಸೀಮಿತ ಸಮುದಾಯಗಳು ಅನುಸೂಚಿತ ಬುಡಕಟ್ಟು ಪಟ್ಟಿಯಲ್ಲಿತ್ತು. ತದ ನಂತರ ಅರ್ಹ ಮಾನದಂಡಗಳನ್ನು ಬದಿಗೊತ್ತಿ ರಾಜಕೀಯ ಹಿತಶಕ್ತಿಗಾಗಿ ಅನೇಕ ಸಮುದಾಯಗಳನ್ನು ಕಾನೂನು ಬಾಹಿರವಾಗಿ ಸೇರ್ಪಡೆ ಮಾಡಲಾಗುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮೂಲ ಆದಿವಾಸಿ ವೇದಿಕೆಯ ಉಪಾಧ್ಯಕ್ಷ ಜೆ.ಕೆ.ತಿಮ್ಮಯ್ಯ, ಬುಡಕಟ್ಟು ಕೃಷಿಕರ ಸಂಘದ ಪ್ರಮುಖರಾದ ವಿಶ್ವನಾಥ್, ಜೆ.ಎ.ಶ್ಯಾಂ ಹಾಜರಿದ್ದರು.