ಅಲೆಮಾರಿಗಳು ಅಭಿವೃದ್ಧಿಯಿಂದ ವಂಚಿತರಾಗಿದ್ದಾರೆ ; ಕಿರಣ್ ಕುಮಾರ್ ಕೊತ್ತಗೆರೆ ಅಭಿಮತ

16 pvg 1
Published on

ಪಾವಗಡ: ಅಲೆವಾರಿ ಬುಡಕಟ್ಟು ಜನರನ್ನು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಸಬಲರನ್ನಾಗಿಸುವ ಉದ್ದೇಶದಿಂದ ಅಲೆಮಾರಿ ಬುಡಕಟ್ಟು ಮಹಾಸಭಾ ಸ್ಥಾಪಿಸಲಾಗಿದೆ ಎಂದು ಅಲೆವಾರಿ ಬುಡಕಟ್ಟು ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್ ಕೊತ್ತಗೆರೆ ಹೇಳಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅಖಿಲ ಕರ್ನಾಟಕ ಕುಳುವ ಮಹಾಸಭಾ ಶುಕ್ರವಾರ ಹಮ್ಮಿಕೊಂಡಿದ್ದ ಅಲೆಮಾರಿ, ಕೊರಚ, ಕುಂಚಿಕೊರವ, ಎರಕುಲ ಸಮುದಾಯಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಸುಮಾರು 25 ಲಕ್ಷ ಜನಸಂಖ್ಯೆ ಇರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಲೆಮಾರಿ ಸಮುದಾಯಗಳಾದ ಹಂದಿಜೋಗಿ, ಸಿಳ್ಳೇಕ್ಯಾತ, ಸುಡುಗಾಡುಸಿದ್ದ, ಕೊರಮ ಕೊರಚ (ಕುಳುವ), ಬುಡ್ಗ ಜಂಗಮ, ಹಕ್ಕಿಪಿಕ್ಕಿ, ಮೇದ, ದೊಂಬರು, ಚನ್ನದಾಸರು, ವಾಂಗ್ ಗಾರುಡಿ, ದಕ್ಕಲಿಗ, ಸಿಂಧೋಳ್ಳು, ಹರಣಿಶಿಕಾರಿ ಹೀಗೆ ಒಟ್ಟು 74 ಸಮುದಾಯಗಳು ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿಯಿಂದ ವಂಚಿತರಾಗಿ ಅಗೋಚರರಾಗಿ ಬದುಕುತ್ತಿದ್ದಾರೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮೀಸಲು ಕ್ಷೇತ್ರಗಳಲ್ಲಿ ಎಸ್ಸಿ, ಎಸ್ಟಿ ಅಲೆವಾರಿಗಳಿಗೆ ಎಲ್ಲ ರಾಜಕೀಯ ಪಕ್ಷಗಳು ಆದ್ಯತೆ ಮೇರೆಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.

ಬುಡಕಟ್ಟು ಅಭಿವೃದ್ಧಿ ನಿಗಮ ಸ್ಥಾಪಿಸಿ : ಅಲೆಮಾರಿ ಬುಡಕಟ್ಟು ಮಹಾಸಭಾ ರಾಜ್ಯ ಖಜಾಂಚಿ ಆದರ್ಶ್ ಯಲ್ಲಪ್ಪ ವಾತನಾಡಿ, ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿಯಲ್ಲಿ ಬಳಕೆಯಾಗದೇ ಉಳಿದಿರುವ 19 ಸಾವಿರ ಕೋಟಿ ರೂಪಾಯಿಯನ್ನು ಸರ್ಕಾರ ಇತರ ಇಲಾಖೆಗೆ ವರ್ಗಾಯಿಸಿದ್ದು, ಈ ಹಣದಲ್ಲಿ ಅಲೆವಾರಿ ಬುಡಕಟ್ಟು ಜನಾಂಗದ ಅಭಿವೃದ್ಧಿಗಾಗಿ ನಿಗಮ ಮಂಡಳಿ ಸ್ಥಾಪಿಸಬಹುದಾಗಿತ್ತು ಎಂದು ಹೇಳಿದರು.

ರಾಜ್ಯ ಸಿಳ್ಳೇಕ್ಯಾತಾಸ್ ಜನಾಂಗಾಭಿವೃದ್ಧಿ ವೇದಿಕೆ ಅಧ್ಯಕ್ಷ ಮಂಜುನಾಥ್ ದಾಯತ್ಕರ್ ಮಾತನಾಡಿ, ರಾಜ್ಯ ಸರ್ಕಾರ ಅಲೆಮಾರಿ, ಅರೆ ಅಲೆಮಾರಿ ಹಾಗೂ ಬುಡಕಟ್ಟು ಜನರ ಏಳಿಗೆಗಾಗಿ ಅಭಿವೃದ್ಧಿ ಕೋಶವೊಂದನ್ನು ಸ್ಥಾಪಿಸಿದೆ. ಇದರ ಮೂಲಕ ಮನೆ, ನಿವೇಶನ, ಸಾಲ ಸೌಲಭ್ಯ, ಸ್ವಯಂ ಉದ್ಯೋಗ ಇತರೆ ಮೂಲ ಸವಲತ್ತುಗಳು ದೊರೆಯಲಿವೆ ಎಂದರು. ರಾಜ್ಯ ಕುಳುವ ಮಹಾಸ ಅಧ್ಯಕ್ಷ ಎಂ.ಆನಂದಪ್ಪ, ಅಲೆಮಾರಿ ಬುಡಕಟ್ಟು ಮಹಾಸಭಾ ರಾಜ್ಯ ಉಪಾಧ್ಯಕ್ಷೆ ಭೀಮಪುತ್ರಿ ನಾಗಮ್ಮ, ಹಂದಿ ಜೋಗಿ ಸವಾಜದ ರಾಜ್ಯ ಕಾರ್ಯಾಧ್ಯಕ್ಷ ವೆಂಕಟರಮಣಯ್ಯ, ಚನ್ನದಾಸ (ಪ.ಜಾ) ಸಂದ ರಾಜ್ಯ ಉಪಾಧ್ಯಕ್ಷ ಬಸವರಾಜು ನಾರಯುಕರ್, ಮುಖಂಡರಾದ ಶ್ರೀನಿವಾಸು ಆಡುಗೋಡು, ರವಿಕುವಾರ್ ಥೆಣಿಸಂದ್ರಿ, ವೆಂಕಟೇಶ್, ಮುಖಂಡರಾದ ಸುಗುಣ ಅಶ್ವತ್ಥ್, ಆನಂದ್ ಕುಮಾರ್ ಏಕಲವ್ಯ ಇದ್ದರು.

ಪದಾಧಿಕಾರಿಗಳ ನೇಮಕ: ಅಖಿಲ ಕರ್ನಾಟಕ ಕುಳುವ ಮಹಾಸಭಾ ತಾಲೂಕು ಘಟಕದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಮುತ್ಯಾಲಪ್ಪ, ಅಧ್ಯಕ್ಷ ವಿದ್ಯುತ್ ಇಲಾಖೆ ಕೆ.ಗಂಗಪ್ಪ, ಕಾರ್ಯದರ್ಶಿ ದಾನ್ ವೀರಭದ್ರಪ್ಪ, ಕಾರ್ಯಾಧ್ಯಕ್ಷ ಹನುಮಂತರಾಯಪ್ಪ, ಖಜಾಂಚಿ ನಾಗರಾಜು, ಜಂಟಿ ಖಜಾಂಚಿ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷ ನಾಗರಾಜು, ಬಿ.ಪಾಂಡಪ್ಪ, ಸಂಟನಾ ಕಾರ್ಯದರ್ಶಿಗಳಾಗಿ ಸುರೇಶ್, ಮಂಜುನಾಥ್ ನೇಮಕವಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net