

ಬೆಳಗಾವಿ: ರಾಷ್ಟ್ರ, ರಾಜ್ಯಮಟ್ಟದ ಹಾಗೂ ಅಂತರ್ ಕಾಲೇಜು ಮಟ್ಟದಲ್ಲಿ ಈಚೆಗೆ ವಿವಿಧೆಡೆ ಜರುಗಿದ ಜುಡೋ ಸ್ಪರ್ಧೆಗಳಲ್ಲಿ ಇಲ್ಲಿನ ಜಿಲ್ಲಾ ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿದ್ದಾರೆ.
ಉತ್ತರ ಪ್ರದೇಶ ಹಾಗೂ ಆಂಧ್ರಪ್ರದೇಶದಲ್ಲಿ ಜರುಗಿದ ಅಂತರ್ ಕಾಲೇಜು ಜುಡೋ ಪಂದ್ಯಾವಳಿಯಲ್ಲಿ ಭೂಷಣ ವನಾರಸೆ, ಸೌರಭ ಪಾಟೀಲ, ರೋಹಣ ಬಿ.ಎಸ್., ರಾಧಿಕಾ ಡುಕರೆ, ಸಾಯಿಶ್ವರಿ ಕೊಡಚವಾಡಕರ ಚಿನ್ನದ ಪದಕ ಪಡೆದು ಮಧ್ಯಪ್ರದೇಶದ ಭೂಪಾಲ್ನಲ್ಲಿ ಜರುಗುವ ರಾಷ್ಟ್ರಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
ರಾಮದುರ್ಗ ತಾಲೂಕಿನ ಚಂದರಗಿಯಲ್ಲಿ ಜರುಗಿದ ಕರ್ನಾಟಕ ರಾಜ್ಯ ಜುಡೋ ಪಂದ್ಯಾವಳಿಯಲ್ಲಿ ತುಕಾರಾಮ ಲಮಾನಿ, ವೈಭವ ಪಾಟೀಲ, ನೇತ್ರಾ ಪತ್ರಾವಳೆ, ಅಂಜಲಿ ಪಾಟೀಲ, ದರ್ಶನ ಪಾಟೀಲ, ಧನುಷ್ ಎಲ್. ಚಿನ್ನದ ಪದಕ ಪಡೆದಿದ್ದಾರೆ. ಬೆಳಗಾವಿಯಲ್ಲಿ ಜರುಗಿದ ರಾಜ್ಯಮಟ್ಟದ ಶಾಲಾ ಪಂದ್ಯಾವಳಿಯಲ್ಲಿ ಆಸೀಮಾ ಸಲ್ಮಾನಿ, ಮೇನಾ ಮೂಲ್ಯಾ, ಕಾವೇರಿ ಸೂರ್ಯವಂಶಿ, ಆರತಿ ಮುರಕುಟೆ, ಸಹನಾ ಬೆಳಗಲಿ, ವೈಷ್ಣವಿ ಭಡಾಂಗೆ, ವೈಭವ ಪಾಟೀಲ, ಅಂಜಲಿ ಪಾಟೀಲ, ಶ್ಲೋಕ್ ಕಾತಕರ್, ತೇಜಸ್, ಶ್ರೇಯಲ್ ಕೌರಿ ಚಿನ್ನದ ಪದಕದೊಂದಿಗೆ ರಾಜಸ್ಥಾನ ಹಾಗೂ ಮಣಿಪುರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಪಂದ್ಯಾವಳಿಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಚಿತ್ರದುರ್ಗದಲ್ಲಿ ಜರುಗಿದ ರಾಜ್ಯಮಟ್ಟದ ಪದವಿಪೂರ್ವ ಜುಡೋ ಪಂದ್ಯಾವಳಿಯಲ್ಲಿ ಸ್ಪಂದನಾ, ಶ್ವೇತಾ ಅಲಕನೂರ, ದಿವ್ಯಾ ಪಾಟೀಲ, ಸೋನಾಲಿಕಾ ಸಿ.ಎಸ್., ಆಫ್ರಿನ್ಬಾನು, ಸಂಗಮೇಶ ಮದಲಿ, ಬಸಲಿಂಗಯ್ಯ ಅಥಣಿಮಠ, ಧನುಷ್ ಎಲ್., ಆರ್ಯನ್ ಡೊಂಗಳೆ, ಚಂದ್ರಶೇಖರಗೌಡ, ಪ್ರಥಮೇಶ ಪಾಟೀಲ ಚಿನ್ನದ ಪದಕ ಗೆದ್ದು, ದೆಹಲಿಯಲ್ಲಿ ಜರುಗುವ ರಾಷ್ಟ್ರಮಟ್ಟದ ಪಂದ್ಯಾವಳಿಗೆ ಆಯ್ಕೆಗೊಂಡಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ಬಿ.ಶ್ರೀನಿವಾಸ್ ತಿಳಿಸಿದ್ದಾರೆ.