

ಮೈಸೂರು: ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ವತಿಯಿಂದ ಡಿ.8, 9 ಮತ್ತು 10ರಂದು ಆದಿಚುಂಚನಗಿರಿ ಕ್ಷೇತ್ರಕ್ಕೆ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ಸಂಸ್ಥಾಪಕ ಅಧ್ಯಕ್ಷೆ ಎಚ್.ಎಲ್.ಯಮುನಾ ಹೇಳಿದರು.
ಪಾದಯಾತ್ರೆ ಡಿ.8ರಂದು ಬೆಳಗ್ಗೆ 7 ಗಂಟೆಗೆ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಬಳಿಯ ಕೆಂಪೇಗೌಡರ ವೃತ್ತದಿಂದ ಪ್ರಾರಂಭವಾಗಿ ಡಿ.10 ರಂದು ಬೆಳಗ್ಗೆ 10 ಗಂಟೆಗೆ ಆದಿಚುಂಚನಗಿರಿ ದೇವಾಲಯದಲ್ಲಿ ಹರಕೆಯ ಪೂಜೆಯೊಂದಿಗೆ ಮುಕ್ತಾಯಗೊಳ್ಳಲಿದೆ. ಕಾಲಭೈರವೇಶ್ವರ, ಕಂಬದಮ್ಮ (ಸ್ಥಂಭಾಂಬಿಕೆ) ಗಂಗಾಧರೇಶ್ವರ ದೇವರಲ್ಲಿ ಅವಿವಾಹಿತ ರೈತ ಯುವಜನರ ವಿವಾಹ ಬೇಡಿಕೆ ಈಡೇರಿಕೆ, ನಾಡಿನಲ್ಲಿ ಮಳೆ ಬೆಳೆ ಚೆನ್ನಾಗಿ ಆಗಿ ಜನರ ಜೀವನ ಸಮೃದ್ಧಿಯಾಗುವುದು, 12 ವರ್ಷಗಳ ಹಿಂದೆ ಧರ್ಮಸ್ಥಳ ಪಾಂಗಳ ಗ್ರಾಮದಲ್ಲಿ ನಡೆದಿರುವ ಒಕ್ಕಲಿಗ ಕುಟುಂಬದ ಅಪ್ರಾಪ್ತೆ ಸೌಜನ್ಯಾಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಕುಟುಂಬಕ್ಕೆ ನ್ಯಾಯ ಕೋರಿ ಹರಕೆ ಹೊರಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮಾಹಿತಿಗೆ ದೂ. 99026 98623 ಸಂಪರ್ಕಿಸುವುದು.
ವೇದಿಕೆ ಸದಸ್ಯೆ ಸುಶೀಲಾ ನಂಜಪ್ಪ ಇದ್ದರು.