ಬೀದಳ್ಳಿ ಅರಣ್ಯ ಶಿಬಿರದಲ್ಲಿ ಪರ್ವತಾರೋಹಣ

15spt3-
ಸೋಮವಾರಪೇಟೆ ಸಮೀಪದ ಬೀದಳ್ಳಿ ಅರಣ್ಯ ಶಿಬಿರದಲ್ಲಿ ನಡೆದ ಪರ್ವತಾರೋಹಣದ ಕಾರ್ಯಕ್ರಮದಲ್ಲಿ ಮಾಹಿತಿ ಪಡೆದ ಸೈನಿಕ ಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು.
Published on

ಸೋಮವಾರಪೇಟೆ: ಅಂತಾರಾಷ್ಟ್ರೀಯ ಮೌಂಟೆನ್ ದಿನದ ಅಂಗವಾಗಿ ಮಡಿಕೇರಿ ವನ್ಯಜೀವಿ ವಿಭಾಗ ಮತ್ತು ಪುಷ್ಪಗಿರಿ ವನ್ಯಜೀವಿ ವಲಯದ ವತಿಯಿಂದ ಶುಕ್ರವಾರ ಬೀದಳ್ಳಿ ಅರಣ್ಯ ಶಿಬಿರದಲ್ಲಿ ಪರ್ವತಾರೋಹಣದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮೌಂಟ್ ಎವರೆಸ್ಟ್ ಪರ್ವತಾರೋಹಣ ಮಾಡಿರುವ ಅನುಭವಿ, ಭಾರತಿಯ ವಾಯುಸೇನೆಯ ನಿವೃತ್ತ ವಿಂಗ್ ಕಮಾಂಡರ್ ಶ್ರೀಧರನ್ ಹಾಗೂ ಭಾರತೀಯ ವಾಯುಸೇನೆಯ ನಿವೃತ್ತ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ಮೂರ್ತಿ ಮಾಹಿತಿ ನೀಡಿದರು. ಕೊಡಗು ಸೈನಿಕ ಶಾಲೆ ಹಾಗೂ ಸೋಮವಾರಪೇಟೆ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಪುಷ್ಪಗಿರಿ ವನ್ಯಜೀವಿ ವಲಯ ಅರಣ್ಯಾಧಿಕಾರಿ ಜೆ. ಅನನ್ಯಕುಮಾರ್, ಉಪವಲಯ ಅರಣ್ಯಾಧಿಕಾರಿಗಳಾದ ಶಶಿ ಮತ್ತು ಗಣೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net