ಕಾನೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ

nrp daa
ಕಾನೂರು ಸಿದ್ಧಿವಿನಾಯಕ ದೇವಸ್ಥಾನದಿಂದ ಭಕ್ತರು ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟರು. ಶಂಕರನಾರಾಯಣ ಭಟ್, ದಿನೇಶ್, ಮಂಜುಳಾ, ಕೃಷ್ಣಮೂರ್ತಿ, ವಿಜಯಕುಮಾರ್ ಇತರರಿದ್ದರು.
Published on

ಎನ್.ಆರ್.ಪುರ: ಹದಿನೇಳು ವರ್ಷದಿಂದ ಶಿವರಾತ್ರಿ ಪ್ರಯುಕ್ತ ಕಾನೂರು ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ಹೋಗುತ್ತಿದ್ದೇವೆ ಎಂದು ಕಟ್ಟಿನಮನೆ ಹಿರಿಯರಾದ ಶಂಕರನಾರಾಯಣ ಭಟ್ ತಿಳಿಸಿದರು.

ಸೋಮವಾರ ಕಾನೂರು ಸಿದ್ಧಿವಿನಾಯಕ ದೇವಸ್ಥಾನದಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಾಗ ಮಾತನಾಡಿ, ವರ್ಷದಿಂದ ವರ್ಷಕ್ಕೆ ಪಾದಯಾತ್ರೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಪ್ರತಿ ವರ್ಷ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಮ್ಮನ್ನು ಬೀಳ್ಕೊಡಲು ಬರುತ್ತಿದ್ದು, ಇದರಿಂದ ನಮ್ಮ ಉತ್ಸಾಹ ಹೆಚ್ಚಾಗಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಅಧಿಕಾರಿ ದಿನೇಶ್ ಮಾತನಾಡಿ, ಧರ್ಮಸ್ಥಳದಲ್ಲಿ ಶಿವರಾತ್ರಿ ಸಮಯದಲ್ಲಿ ವಿಶೇಷ ಕಾರ್ಯಕ್ರಮ ನಡೆಯುತ್ತಿದೆ. ಎಲ್ಲರೂ ಶ್ರದ್ಧೆಯಿಂದ ಭಾಗವಹಿಸಿ ಸ್ವಚ್ಛತೆ ಕಾಪಾಡಬೇಕು ಎಂದರು.
ಬಿ.ಎಚ್.ಕೈಮರದ ವಲಯ ಮೇಲ್ವಿಚಾರಕ ತೀರ್ಥರಾಜ್ ಮಾತನಾಡಿ, ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುವುದರಿಂದ ಪುಣ್ಯ ಸಂಪಾದನೆ ಸಾಧ್ಯ. ಪ್ರತಿಯೊಬ್ಬರಿಗೂ ದೇವರ ಮೇಲೆ ಭಕ್ತಿ ಇರಬೇಕು ಎಂದರು.
ಸೇವಾ ಪ್ರತಿನಿಧಿ ಮಂಜುಳಾ, ಸಂಘಟಕ ಕೃಷ್ಣ್ಣಮೂರ್ತಿ, ವಿಜಯಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net