ಅಪಾಯಕ್ಕೆ ಎಡೆ ಮಾಡಿಕೊಡುತ್ತಿರುವ ಮರಗಳು

2 ckm 3
ಚಿಕ್ಕಮಗಳೂರು ತಾಲೂಕಿನ ಕೈಮರ ತರೀಕೆರೆ ರಸ್ತೆಯಲ್ಲಿ ರಸ್ತೆಗೆ ವಾಲಿಕೊಂಡು ನಿಂತಿರುವ ಮರ.
Published on

ಚಿಕ್ಕಮಗಳೂರು: ನಗರದ ಹೊರವಲಯದ ಕೈಮರದಿಂದ ಲಿಂಗದಹಳ್ಳಿ, ತರೀಕೆರೆ ರಸ್ತೆಯಲ್ಲಿ ಭಾರಿ ಮಳೆ ಹಾಗೂ ಗಾಳಿಯಿಂದ ಹತ್ತಾರು ಮರಗಳು ರಸ್ತೆ ಮೇಲೆ ಹಾಗೂ ವಿದ್ಯುತ್ ಕಂಬಗಳ ಮೇಲೆ ಬಿದ್ದಿದ್ದು, ಅವುಗಳನ್ನೇನೋ ತೆರವುಗೊಳಿಸಲಾಗಿದೆ. ಆದರೆ ರಸ್ತೆಗೆ ವಾಲಿಕೊಂಡು ನಿಂತಿರುವ ಮರಗಳನ್ನು ತೆರವುಗೊಳಿಸದೇ ಇರುವುದು ಆಪಾಯಕ್ಕೆ ಆಹ್ವಾನ ನೀಡುವಂತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಎರೆಹಳ್ಳ, ಬೈನೆಕೋಲ್ ಗ್ರಾಮದ ಬಳಿ ಬೃಹತ್ ಮರವೊಂದು ರಸ್ತೆಗೆ ವಾಲಿ ರಸ್ತೆ ಬದಿಯ ಮತ್ತೊಂದು ಮರಕ್ಕೆ ಒರಗಿ ನಿಂತಿದೆ. ಮತ್ತೊಂದು ಮರ ವಿದ್ಯುತ್ ತಂತಿಗಳ ಮೇಲೆ ಬಿದ್ದಿದು, ಈ ಮರವನ್ನು ಕತ್ತರಿಸಿ ತೆಗೆಯಲಾಗಿದೆ. ಆದರೆ ಅರ್ಧ ಮರವನ್ನು ಅದೆ ಸ್ಥಿತಿಯಲ್ಲಿ ಬಿಟ್ಟಿದ್ದಾರೆ. ಇನ್ನು ಮೂರು ನಾಲ್ಕು ಕಡೆ ವಿದ್ಯುತ್ ಕಂಬಗಳು ರಸ್ತೆ ಕಡೆಗೆ ವಾಲಿ ನಿಂತಿವೆ. ಒಂದು ವಾರ ಕಳೆದರು ಅಪಾಯಕ್ಕೆ ಆಹ್ವಾನ ನೀಡುವಂತಿರುವ ಮರ ಹಾಗೂ ವಿದ್ಯುತ್ ಕಂಬಗಳನ್ನು ತೋಟದ ಮಾಲೀಕರಾಗಲಿ ಹಾಗೂ ಸಂಬAಧಿಸಿದ ಇಲಾಖೆಯವರಾಗಲಿ ತೆರವುಗೊಳಿಸಿಲ್ಲ ಎಂದು ಆರೋಪಿಸಿದ್ದಾರೆ.
ಇದೆ ರಸ್ತೆಯ ಹಲವೆಡೆ ಒಣಗಿದ ಮರಗಳು ಹಾಗು ಹಸಿ ಮರಗಳು ರಸ್ತೆ ಕಡೆಗೆ ಬಾಗಿ ನಿಂತಿದ್ದು, ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು, ಸಾರ್ವಜನಿಕರು ಸಂಚರಿಸುತ್ತಾರೆ. ವಾಹನಗಳ ಮೇಲೆ ಮರ ಬಿದ್ದು ಅನಾಹುತ ಸಂಭವಿಸುವ ಮೊದಲು ಅವುಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net