ಮಳೆಗೆ ಮರಗಳು ಧರೆಗೆ

tree (1)
ಕಡಹಿನಬೈಲು ಗ್ರಾಪಂನ ವಿಠಲ ಗ್ರಾಮದ ಕೆಸವೆಯಲ್ಲಿ ಮನೆ ಮೇಲೆ ಮರ ಬಿದ್ದಿರುವುದು.
Published on

ಎನ್.ಆರ್.ಪುರ: ಎರಡು ದಿನಗಳಿಂದ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದ್ದು, ಶುಕ್ರವಾರ ಗುಬ್ಬಿಗಾ ಗ್ರಾಪಂ ನೆರೆಮನೆ ಎಂಬಲ್ಲಿ ರಸ್ತೆ ಮೇಲೆ ಮರ ಬಿದ್ದು ಗಂಟೆಗಟ್ಟಲೆ ಸಂಚಾರ ಅಸ್ತವ್ಯಸ್ತವಾಗಿತ್ತು.

ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಸಾರ್ವಜನಿಕರ ಸಹಕಾರದಿಂದ ಮರ ತೆರವುಗೊಳಿಸಿದರು. ಕಡಹಿನಬೈಲು ಗ್ರಾಪಂನ ವಿಠಲ ಗ್ರಾಮದ ಕೆಸವೆಯ ಲೀಲಾ ಎಂಬುವವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಗ್ರಾಪಂ ಸದಸ್ಯ ಸುನೀಲ್‌ಕುಮಾರ್, ಪಿಡಿಒ ಪ್ರೇಮಾ ಸ್ಥಳ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net